ಬಿಎಸ್‌ವೈ ಶಿವಮೊಗ್ಗಕ್ಕೆ ಹೆದರಿ ಉ.ಕದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ : ತಿಮ್ಮಾಪುರ

ಬಾಗಲಕೋಟೆ : ಯಡಿಯೂರಪ್ಪ  ಉತ್ತರ ಕರ್ನಾಟದಲ್ಲಿ ಸ್ಪರ್ಧೆ ಮಾಡುವ ವಿಚಾರ ಕುರಿತಂತೆ ಬಾಗಲಕೋಟೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿಕೆ ನೀಡಿದ್ದು,  ಬಿಎಸ್ ವೈ ಶಿವಮೊಗ್ಗದಲ್ಲಿ ಹೆದರಿ ಉತ್ತರ ಕನಾ೯ಟಕಕ್ಕೆ ಸ್ಪಧೆ೯ಗೆ ಮುಂದಾಗುತ್ತಿದ್ದಾರೆ.

ಶಿವಮೊಗ್ಗದಲ್ಲಿ ಕೈಲಾಗದಿದ್ದಕ್ಕೆ ಇಲ್ಲಿ ಬತಾ೯ರೆ ಅಂದ್ರೆ ಭಯ ಇರಬಹುದೇನು. ಕಾಯ೯ಕತ೯ರಿಗೂ ಆತಂಕವಿರಬಹುದು. ಯಡಿಯೂರಪ್ಪ ಉತ್ತರ ಕನಾ೯ಟಕಕ್ಕೆ ಬಂದರೂ ಅದೇ ಗತಿ. ಅಮಿತ್‌ ಶಾ ಬರಲಿ, ಯಡಿಯೂರಪ್ಪ ಬರಲಿ ಯಾರೇ ಬಂದರೂ ಕಾಂಗ್ರೆಸ್ ಗೆ ಏನು ಆಗೋದಿಲ್ಲ ಎಂದಿದ್ದಾರೆ.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ಉತ್ತರ ಕನಾ೯ಟಕದ ಸ್ಪಧೆ೯ ವಿಚಾರ ಕುರಿತಂತೆ ಹೇಳಿಕೆ ನೀಡಿದ್ದು, ಈಗಾಗಲೇ ಸಿದ್ದರಾಮಯ್ಯನವರಿಗೆ ಬಾಗಲಕೋಟೆಯಿಂದ ಸ್ಫಧೆ೯ ಮಾಡಲು ಮನವೊಲಿಸುತ್ತಿದ್ದೇವೆ. ನಮ್ಮ ನಾಡಿನಿಂದ ಸ್ಪರ್ಧೆ  ಮಾಡಿದರೆ ನಮಗೆ ಇನ್ಮೂ ಖುಷಿ‌.  ಸಿದ್ದರಾಮಯ್ಯನವರು ಯಾವುದೇ ಕ್ಷೇತ್ರದಿಂದ ಸ್ಪಧಿ೯ಸಿದರೂ ಗೆದ್ದೇ ಗೆಲ್ಲಿಸುವುದಾಗಿ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com