ನವದೆಹಲಿ : ಸೈನಿಕನ ಕಪಾಳಕ್ಕೆ ಹೊಡೆದ ಮಹಿಳೆಯ ಬಂಧಿಸಿದ ಪೋಲೀಸ್

ನವದೆಹಲಿ : ನಡುರಸ್ತೆಯಲ್ಲಿ ಸೈನಿಕನ ಕಪಾಳಕ್ಕೆ ಹೊಡೆದ ಮಹಿಳೆಯನ್ನು ದೆಹಲಿ ಪೋಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ದೆಹಲಿಯ 44 ವರ್ಷದ ಸ್ಮೃತಿ ಕಾಲ್ರಾ ಎಂಬ ಮಹಿಳೆ ಭಾರತೀಯ ಯೋಧನ ಮೇಲೆ ಕೈ ಮಾಡಿದ ವಿಡಿಯೋ ವೈರಲ್ ಆಗಿತ್ತು. ದಕ್ಷಿಣ ದೆಹಲಿಯ ವಸಂತ್ ಕುಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿತ್ತು. ಗುರಗಾಂವ್ ನಿವಾಸಿಯಾದ ಸ್ಮೃತಿ ಕಾಲ್ರಾ, ಸೈನಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್ ತನ್ನ ಇಂಡಿಕಾ ಕಾರಿಗೆ ತಗುಲಿತು ಎಂಬ ಕಾರಣಕ್ಕೆ ಯೋಧನ ಕಪಾಳಕ್ಕೆ ಹೊಡೆದಿದ್ದಳು.

ಘಟನೆಯ ಬಗ್ಗೆ, ಸೇನೆ ದೆಹಲಿ ಪೋಲೀಸರಿಗೆ ಈ ವಿಷಯ ತಿಳಿಸಿದ ನಂತರ ಕ್ರಮ ಕೈಗೊಂಡ ಪೋಲೀಸರು ಈಕೆಯನ್ನು ಬಂಧಿಸಿದ್ದಾರೆ. ಕೆಲ ಗಂಟೆಗಳ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ಆಕೆಯ ಇಂಡಿಕಾ ವಾಹನವನ್ನು ಪೋಲೀಸರು ಜಪ್ತಿ ಮಾಡಿಕೊಂಡಿದ್ದಾರೆ.

Comments are closed.

Social Media Auto Publish Powered By : XYZScripts.com