Badminton : ಕೊರಿಯನ್ ಸೂಪರ್ ಸಿರೀಸ್ ಫೈನಲ್ ಗೆ ಲಗ್ಗೆಯಿಟ್ಟ ಸಿಂಧು..

ಓಲಿಂಪಿಕ್ ಬೆಳ್ಳಿ ಪದಕ ವಿಜೇತೆ ಭಾರತದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಕೋರಿಯನ್ ಸೂಪರ್ ಸಿರೀಸ್ನಲ್ಲಿ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ತಲುಪಿದ್ದಾರೆ. ಶನಿವಾರ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಚೀನಾದ ಹಿ ಬಿಂಗ್ಜಿ ಯಾವೋ ಅವರನ್ನು, ಮೂರು ಗೇಮ್ ಗಳಲ್ಲಿ 21-10, 17-21, 21-16 ಪಾಯಿಂಟ್ ಗಳಿಂದ ಸೋಲಿಸಿದ್ದಾರೆ. ರವಿವಾರ ನಡೆಯಲಿರುವ ಫೈನಲ್ನಲ್ಲಿ ಜಪಾನಿನ ನೊಜೊಮಿ ಓಕುಹಾರಾ ಅವರನ್ನು ಎದುರಿಸಲಿದ್ಧಾರೆ. ಕಳೆದ ತಿಂಗಳು ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಷಿಪ್ ನಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿದ್ದರು.

 

Comments are closed.