ಇಂಡಿಪೆಂಡೆನ್ಸ್ ಕಪ್ : 3ನೇ T-20ಯಲ್ಲಿ ಗೆಲುವು ; 2-1 ರಿಂದ ಸರಣಿ ಜಯಿಸಿದ ಪಾಕ್
ವಿಶ್ವ ಇಲೆವನ್ ಹಾಗೂ ಪಾಕಿಸ್ತಾನ ತಂಡಗಳ ನಡುವಿನ 3ನೇ ಟಿ-20 ಪಂದ್ಯದಲ್ಲಿ ಪಾಕ್ 33 ರನ್ ಗೆಲುವು ದಾಖಲಿಸಿದೆ. ಲಾಹೋರಿನ ಗಡ್ಡಾಫಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವಿಶ್ವ ಇಲೆವನ್ ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 183 ರನ್ ಮೊತ್ತ ಸೇರಿಸಿತು. ಪಾಕ್ ಪರ ಅಹ್ಮದ್ ಶೆಹಜಾದ್ 83 ಹಾಗೂ ಬಾಬರ್ ಆಜಮ್ 48 ರನ್ ಬಾರಿಸಿದರು.
ಗುರಿಯನ್ನು ಬೆನ್ನತ್ತಿದ ವಿಶ್ವ ಇಲೆವನ್ ತಂಡ 20 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು 150 ರನ್ ಗಳಿಸಲಷ್ಟೇ ಶಕ್ತವಾಯಿತು. WXI ಪರ ಡೇವಿಡ್ ಮಿಲ್ಲರ್ 32 ಹಾಗೂ ತಿಸಾರಾ ಪೆರೆರಾ 32 ರನ್ ಬಾರಿಸಿದರೂ ಜಯ ತಂದು ಕೊಡಲು ಸಾಧ್ಯವಾಗಲಿಲ್ಲ. 33 ರನ್ ಜಯಗಳಿಸಿದ ಪಾಕ್, 2-1 ರಿಂದ ಸರಣಿಯನ್ನು ತನ್ನದಾಗಿಸಿಕೊಂಡಿತು. 83 ರನ್ ಗಳಿಸಿದ ಅಹ್ಮದ್ ಶೆಹಜಾದ್ ಪಂದ್ಯಶ್ರೇಷ್ಟ ಪ್ರಶಸ್ತಿ ಹಾಗೂ ಬಾಬರ್ ಆಜಮ್ ಸರಣಿ ಶ್ರೇಷ್ಟ ಪ್ರಶಸ್ತಿಗೆ ಭಾಜನರಾದರು.
Comments are closed.