ಕತಾರ್‌ನಲ್ಲಿ ಭರ್ಜರಿ ಪ್ರದರ್ಶನ ಕಂಡ ಒಂದು ಮೊಟ್ಟೆಯ ಕಥೆ….

ಕತಾರ್‌ : ಅರಬ್ ರಾಷ್ಟ್ರವಾದ ಕತಾರ್‌ನಲ್ಲಿ ಇತ್ತೀಚಿಗೆ ಒಯಸಿಸ್‌ ಕನ್ನಡ ಮೂವೀಸ್‌ ಮುಖಾಂತರ ಒಂದು ಮೊಟ್ಟೆಯ ಕಥೆ ಸಿನಿಮಾ ಭರ್ಜರಿ ಪ್ರದರ್ಶನ ಕಂಡಿದೆ.

ರಾಜ್‌ ಬಿ ಶೆಟ್ಟಿ ನಿರ್ದೇಶನದ, ಪವನ್‌ ಕುಮಾರ್‌ ಮತ್ತು ಸುಹಾನ್‌ ಪ್ರಸಾದ್ ನಿರ್ಮಿಸಿರುವ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಂಡಿರುವುದಾಗಿ ಇದರ ಸೂತ್ರಧಾರ ಸುಬ್ರಮಣ್ಯ ಹೆಬ್ಬಾಗಿಲು ತಿಳಿಸಿದ್ದಾರೆ.

ಚಿತ್ರದ ಯಶಸ್ಸಿಗೆ ತಮ್ಮ ಜೊತೆ ದುಡಿದಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ  ಸಂಖ್ಯೆಯಲ್ಲಿ ಕನ್ನಡ ಚಿತ್ರಗಳು ಕತಾರ್‌ನಲ್ಲಿ  ಪ್ರದರ್ಶನಗೊಳ್ಳಲಿವೆ. ಸದ್ಯದಲ್ಲೇ “ಕಾಫಿ ತೋಟ” ದ ಘಮ ಕತಾರ್‌ನಲ್ಲಿ ಪಸರಿಸಲಿದೆಯೆಂದು ತಿಳಿಸಿದರು.

Comments are closed.