ಜಪಾನ್‌ ಮೇಲೆ ಮತ್ತೆ ಕ್ಷಿಪಣಿ ಹಾರಿಸಿ ಉದ್ಧಟತನ ಮೆರೆದ ಉತ್ತರ ಕೊರಿಯಾ

ಸಿಯೋಲ್‌ : ವಿಶ್ವರ ರಾಷ್ಟ್ರಗಳ ಎಚ್ಚರಿಕೆಯನ್ನು ಉಲ್ಲಂಘಿಸಿ ಉತ್ತರ ಕೊರಿಯಾ ಮತ್ತೆ ಜಪಾನ್‌ ಮೇಲೆ ಕ್ಷಿಪಣಿ ಹಾರಿಸಿ ಉದ್ದಟತನ ಮೆರೆದಿದೆ. ಇಂದು ಮುಂಜಾನೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಂಗ್‌ ಉನ್ ನೇತೃತ್ವದಲ್ಲಿ ಪ್ಯಾಂಗ್‌ಯಾಂಗ್‌ನಿಂದ ಕ್ಷಿಪಣಿ ಉಡಾವಣೆ ಮಾಡಿದ್ದು, ಈ ಕ್ಷಿಪಣಿ ಸುಮಾರು 3700 ಕಿ.ಮೀ ದೂರ ತಲುಪಿದ್ದಲ್ಲದೆ, ಜಪಾನ್‌ನ ಹೊಕೈಡೊ ಬಂದರನ್ನು ಹಾದು ಪೆಸಿಪಿಕ್‌ ಸಾಗರದಲ್ಲಿ ಬಿದ್ದಿದೆ. ಈ ಬಗ್ಗೆ ಉತ್ತರ ಕೊರಿಯಾ  ಹಾಗೂ ಜಪಾನ್ ಮೂಲಗಳು ಮಾಹಿತಿ ನೀಡಿವೆ.

ಕೆಲ ದಿನಗಳ ಹಿಂದಷ್ಟೇ ಉತ್ತರ ಕೊರಿಯಾ ಅಮೆರಿಕವನ್ನು ಸಂಪೂರ್ಣ ಸುಟ್ಟು ಬೂದಿ ಮಾಡುತ್ತೇವೆ. ಜಪಾನನ್ನು ಸಂಪೂರ್ಣ ನಿರ್ನಾಮ ಮಾಡುತ್ತೇವೆ ಎಂದಿತ್ತು. ಈ ಬೆನ್ನಲ್ಲೇ ಜಪಾನ್ ಮೇಲೆ ಕ್ಷಿಪಣಿ ಉಡಾವಣೆ ಮಾಡಿರುವುದು, ಜಪಾನ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಉತ್ತರ ಕೊರಿಯಾ ಪದೇ ಪದೇ ಕ್ಷಿಪಣಿ ಉಡಾವಣೆ ಮಾಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ಉ.ಕೊರಿಯಾ ಮೇಲೆ ಹೊಸ ನಿರ್ಬಂಧಗಳನ್ನು ಹೇರಿತ್ತು. ಇದನ್ನೂ ಮೀರಿ ಕ್ಷಿಪಣಿ ಉಡಾವಣೆ ಮಾಡಿ ಸರ್ವಾಧಿಕಾರಿ ಧೋರಣೆ ಮೆರೆಯುತ್ತಿದೆ.

Comments are closed.