ಕಲರ್ಸ್ ಕನ್ನಡದಲ್ಲಿ ರಾಕ್ ಮಾಡಲಿದೆ ‘ಯಶಸ್ ವಿನಾಯಕ’

ಬೆಂಗಳೂರು: 55ನೇಬೆಂಗಳೂರು ಗಣೇಶೋತ್ಸವದ ಅಂಗವಾಗಿ ಬಸವನಗುಡಿ ನ್ಯಾಷನಲ್‍ ಕಾಲೇಜು ಆವರಣದಲ್ಲಿ ನಡೆದರಾಕಿಂಗ್ ಸ್ಟಾರ್‍ಯಶ್‍ ಜತೆಗೆ ಆಚರಿಸುವ ವಿನೂತನ ಕಾರ್ಯಕ್ರಮ”ಯಶಸ್‍ವಿನಾಯಕ” ಸೆಪ್ಟೆಂಬರ್ 17 ಭಾನುವಾರ ಸಂಜೆ 6 ಗಂಟೆಗೆ ಕಲರ್ಸ್‍ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.


ಕಾರ್ಯಕ್ರಮದ ನಿರೂಪಕ ರಿಯಾಲಿಟಿ ಸ್ಟಾರ್‍ ಅಕುಲ್ ಬಾಲಾಜಿ ಗಣೇಶನಿಗೆ ಮಂಗಳಾರತಿ ಮುಗಿಸಿ, ಒಂದು ಭರ್ಜರಿ ಡಾನ್ಸ್ ಮಾಡಿ ನೆರೆದ ಪ್ರೇಕ್ಷಕರ ಗಮನ ಸೆಳೆದರೆ, ಗಣೇಶೋತ್ಸವದಕೇಂದ್ರ ಬಿಂದುರಾಕಿಂಗ್ ಸ್ಟಾರ್‍ ಯಶ್‍ ಅದ್ದೂರಿ ನೃತ್ಯದ ಮೂಲಕ ವೇದಿಕೆಗೆ ಆಗಮಿಸಿ ಕಾರ್ಯಕ್ರಮದುದ್ದಕ್ಕೂ ಅಭಿಮಾನಿಗಳನ್ನು ರಂಜಿಸಿದರು.

ಗಣೇಶೋತ್ಸವದಲ್ಲಿ ಯಶ್ ಹಾಗೂ ವಿನಾಯಕನ ನಡುವೆ ಇರುವ ಸಂಬಂಧದ ಗುಟ್ಟನ್ನು ಬಿಚ್ಚಿಟ್ಟರು. ಆರ್ಕೇಸ್ಟ್ರಾ ದಿನಗಳನ್ನು ಮೆಲುಕು ಹಾಕುವುದರೊಂದಿಗೆ, ಹಲವು ತಮಾಷೆ ಪ್ರಸಂಗಗಳನ್ನು ನೆನೆದು ತಾವೂ ನಕ್ಕು ಅಭಿಮಾನಿಗಳನ್ನು ನಗಿಸಿದರು. ಅಷ್ಟೇ ಅಲ್ಲದೇ ಅಮ್ಮನ ಮುದ್ದಿನ ಮಗನಿಗೆ ಅಮ್ಮನ ಕೈ ರುಚಿಯನ್ನು ಕಂಡು ಹಿಡಿಯುವ ಪರೀಕ್ಷೆ ಒಂದೆಡೆಯಾದರೆ, ಪತ್ನಿ ರಾಧಿಕಾಳಿಂದಲೇ ಅನೀರಿಕ್ಷಿತವಾದ ಪ್ರಶ್ನೆಗೆ ಉತ್ತರಿಸುವ ಪೇಚಾಟಕ್ಕೆ ಸಿಲುಕಿದರು ಯಶ್.

ಮದುವೆಯ ನಂತರ ಯಶ್ – ರಾಧಿಕಾ ಜೋಡಿಗೆಇದು ಮೊದಲ ಗಣೇಶ ಹಬ್ಬವಾದ್ದರಿಂದ ತಾರಾ ಜೋಡಿ ಚಿರಸ್ಮರಣೀಯಗೊಳಿಸಲು ಪ್ರೇಕ್ಷಕರನ್ನು ತಮ್ಮ ಹಾಡು, ಡಾನ್ಸು, ಮಾತು ಆಟಗಳಿಂದ ರಂಜಿಸಿದರು.

Comments are closed.

Social Media Auto Publish Powered By : XYZScripts.com