ದರ್ಶನ್ ಅಭಿಮಾನಿಗಳಿಗೆ ತಾರಕನ ಸಿಹಿಸುದ್ದಿ..! ಫಿಕ್ಸ್ ಆಯ್ತು ರಿಲೀಸ್ ಡೇಟ್..

ಚಕ್ರವರ್ತಿ ಸಿನೆಮಾದ ನಂತರ ದರ್ಶನ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿರುವ ಬಹು ನಿರೀಕ್ಷಿತ ಸಿನೆಮಾ “ತಾರಕ”. ಮಿಲನ ಪ್ರಕಾಶ್ ನಿರ್ದೇಶನದ ಚಲನಚಿತ್ರವಿದಾಗಿದ್ದು, ಬಹುದೊಡ್ಡ ತಾರಬಳಗವನ್ನು ಹೊಂದಿದೆ. ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನನ ಜೊತೆಗೆ ಡೈನಮಿಕ್ ಹೀರೊ ದೆವರಾಜ್ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದು, ನಾಯಕಿಯಾಗಿ ಶೃತಿ ಹರಿಹರನ್ ಹಾಗೂ ಶಾನ್ವಿ ಸಾಥ್ ನೀಡಿದ್ದಾರೆ. ಕಳೆದ ತಿಂಗಳು ತಾರಕನ ಹಾಡುಗಳನ್ನು ಮಾರುಕಟ್ಟೆಗೆ ಬಿಡಲಾಗಿತ್ತು, ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಕೇಳುಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯದಶಮಿಯ ವಿಶೇಷ ಉಡುಗೊರೆಯನ್ನು ದರ್ಶನ್ ಅಭಿಮಾನಿಗಳಿಗೆ ನೀಡಲು ನಿರ್ಧರಿಸಿದ್ದಾರೆ. ತಾರಕ ಚಿತ್ರದ ಬಿಡುಗಡೆಯ ದಿನಾಂಕವನ್ನು ಖಾತರಿ ಪಡೆಸಿರುವ ಚಿತ್ರತಂಡ, ಹರುಷದ ಉಣಬಡಿಸಲು ತಾರಕನಾಗಿ ಚಿತ್ರಮಮಂದಿರಕ್ಕೆ ಬರುತ್ತಿದ್ದಾನೆ. ರಾಜ್ಯಾದಂತ ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆರೆಕಾಣಲಿರುವ ತಾರಕ, ಎಲ್ಲಾ ಹಿಂದಿನ ದಾಖಲೆಗಳನ್ನು ಮುರಿಯುವ ನೀರಿಕ್ಷೆಯಲ್ಲಿದ್ದಾನೆ. ಸಂತಸ ತರುವ ಸಂಗತಿಯೆನೆಂದರೆ ಇದೇ ತಿಂಗಳು ಸೆಪ್ಟೆಂಬರ್ 29 ರಂದು ದರ್ಶನ್ ತೂಗುದೀಪನ ಹುಟ್ಟು ಹಬ್ಬವಾಗಿದ್ದು, ಅಂದೇ ಚಲನಚಿತ್ರವನ್ನು ಬಿಡುಗಡೆ ಮಾಡಲು ಎಲ್ಲಾ ತಯಾರಿಯಾಗಿದ್ದು ದಿನಾಂಕವನ್ನು ಚಿತ್ರತಂಡ ಘೋಷಿಸಿದೆ. ಸೆಪ್ಟೆಂಬರ್ 29 ರಂದು ತಾರಕನ ಬಿಡುಗಡೆ.

Comments are closed.

Social Media Auto Publish Powered By : XYZScripts.com