25ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ : ಅಂಧರ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ..!

ಚಿತ್ರನಟಿ ಅಮೂಲ್ಯರವರು ಇಪ್ಪತ್ತೈದರ ವಸಂತಕ್ಕೆ ಕಾಲಿಟ್ಟಿದ್ದಾರೆ. ಚೊಚ್ಚಲ ಬಾರಿಗೆ ಗಂಡನ ಮನೆಯವರೊಂದಿಗೆ ಹುಟ್ಟುಹಬ್ಬ ಆಚರಿಸಿದ ನಟಿ ಇಂದಿನ ದಿನವನ್ನು ವಿಶೇಷವಾಗಿ ಸಂಭ್ರಮಿಸಿದರು. ರಾಮನಗರದ ಅರ್ಚಕರಹಳ್ಳಿಯ ಬಿ.ಜಿ.ಎಸ್. ಅಂಧರ ಶಾಲೆಯ ಮಕ್ಕಳಿಗೆ ಹಣ್ಣು,ಸಿಹಿ ಮತ್ತು ಬ್ಲಾಂಕೆಟ್ ವಿತರಿಸಿದರು.

ಹಿಂದಿನ ಎಲ್ಲಾ ಹುಟ್ಟುಹಬ್ಬಕ್ಕಿಂತಲೂ 25ರ ವಸಂತಕ್ಕೆ  ವಿಭಿನ್ನವಾಗಿ ಕಾಲಿಟ್ಟ ಕಾರಣ ಪತಿ ಜಗದೀಶ್ ಹಾಗೂ ಕುಟುಂಬಸ್ಥರೊಡಗೂಡಿ ಆಚರಿಸಿದ್ದಾಗಿದೆ.ಮಕ್ಕಳೊಡಗೂಡಿ ಕಾಲಕಳೆದ ನಂತರ ನಟಿ ಅಮೂಲ್ಯ ದಂಪತಿ, ಆದಿಚುಂಚನಗಿರಿ ಶಾಖಾ ಮಠದಲ್ಲಿನ ಅನ್ನದಾನೇಶ್ವರ ಸ್ವಾಮಿಯ ಆಶೀರ್ವಾದ ಪಡೆದರು.

One thought on “25ನೇ ವಸಂತಕ್ಕೆ ಕಾಲಿಟ್ಟ ನಟಿ ಅಮೂಲ್ಯ : ಅಂಧರ ಶಾಲೆಯಲ್ಲಿ ಹುಟ್ಟುಹಬ್ಬ ಆಚರಣೆ..!

  • October 20, 2017 at 9:33 PM
    Permalink

    Your blog has the same post as another author but i like your better.;`.`~

Comments are closed.

Social Media Auto Publish Powered By : XYZScripts.com