ಸುಮಲತಾ ಮತ್ತು ನಾಗಾರ್ಜುನ ಮದುವೆಯಾಗಬೇಕಿತ್ತಾ? ಸುಮಲತಾ ಒಲ್ಲೆ ಎಂದಿದ್ದೇಕೆ ?

ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ಮತ್ತು ತೆಲುಗಿನ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಮದುವೆಯಾಗಬೇಕಿತ್ತಾ? ಮದುವೆಯ ಪ್ರೊಪೋಸಲ್ ನ್ನು ಸುಮಲತಾ ತಿರಸ್ಕರಿಸಿದ್ರಾ? ಹೀಗೊಂದು ಸುದ್ದಿ ಎಲ್ಲೆಡೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಾರಣ ಸುಮಲತಾ ಇತ್ತೀಚೆಗೆ ತೆಲುಗು ಖಾಸಗಿ ವಾಹಿನಿಯೊಂದಕ್ಕೆ ಕೊಟ್ಟ ಸಂದರ್ಶನ.

ಸುಮಲತಾ ಮತ್ತು ನಾಗಾರ್ಜುನ ನಿಜಜೀವನದಲ್ಲಿ ಸತಿಪತಿಗಳಾಗಬೇಕಿತ್ತು, ಇದು ನಾಗಾರ್ಜುನ ತಂದೆ ಅಕ್ಕಿನೇನಿ ನಾಗೇಶ್ವರ ರಾವ್ ರವರ ಆಸೆಯೂ ಆಗಿತ್ತು. ಆದರೆ ಖುದ್ದು ಸುಮಲತಾ ಮದುವೆಯ ಪ್ರೊಪೋಸಲ್ ನ್ನು ತಿರಸ್ಕರಿಸಿದ್ರು. ಹೀಗೊಂದು ಸುದ್ದಿ ಎಲ್ಲೆಡೆ ಗುಲ್ಲೆಬ್ಬಿಸಿದೆ. ಆದರೆ ನಿಜವಾದ ವಿಷಯ ಇದಲ್ಲ ಎಂದು ಖುದ್ದು ಸುಮಲತಾ ಸ್ಪಷ್ಟೀಕರಣ ನೀಡಿದ್ದಾರೆ.

ನಾಗಾರ್ಜುನ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನವೇ ಅವರ ತಂದೆ ನಾಗೇಶ್ವರ ರಾವ್ ಜೊತೆ ಸುಮಲತಾ ಒಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದರಂತೆ. ಆಗ ಯಾವುದೋ ವಿಚಾರ ಮಾತನಾಡುವಾಗ ತಮ್ಮ ಮಗ ನಾಗಾರ್ಜುನನಿಗೆ ಮದುವೆ ಮಾಡಬೇಕು, ಆತ 6 ಅಡಿ ಎತ್ತರವಿರುವುದರಿಂದ ಎತ್ತರದ ಹುಡುಗಿಯನ್ನೇ ಹುಡುಕಬೇಕು. ನೀನೇದ್ರೂ ನನ್ನ ಮಗನನ್ನು ಮದುವೆಯಾಗ್ತೀಯಾ? ಎಂದು ತಮಾಷೆಗೆ ಎಎನ್ಆರ್ ಸುಮಲತಾರನ್ನು ಕೇಳಿದ್ದರಂತೆ.

ಸುಮಲತಾ ಮಾತಿಗೆ ನಕ್ಕು ಸುಮ್ಮನಾಗಿದ್ದಂತೆ. ಅಂದು ನಡೆದ ತಮಾಷೆ ಸಂಭಾಷಣೆಯ ಪ್ರಸಂಗವನ್ನು ಸುಮಲತಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದನ್ನು ತಪ್ಪಾಗಿ ಅರ್ಥೈಸಿಕೊಂಡ ಅನೇಕರು ಇಲ್ಲಸಲ್ಲದ ಗಾಳಿಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಸುಮಲತಾ ಹೇಳಿದ್ದಾರೆ. ಬಣ್ಣದ ಲೋಕದಲ್ಲಿ ಹೇಳಿದ್ದೊಂದು, ಆಗಿದ್ದು ಮತ್ತೊಂದು ಎನ್ನುವ ಇಂಥಾ ಪ್ರಸಂಗಗಳು ಸಾಕಷ್ಟಿವೆ ಬಿಡಿ ಎಂದು ಚಿತ್ರರಂಗದ ಜನ ನಕ್ಕು ಸುಮ್ಮನಾಗಿದ್ದಾರೆ.

Comments are closed.

Social Media Auto Publish Powered By : XYZScripts.com