ನನಗೆ ಗೌರಿನೂ ಗೊತ್ತಿಲ್ಲ, ಅವರಪ್ಪನೂ ಗೊತ್ತಿಲ್ಲ : ಕಲ್ಲಡ್ಕ ಪ್ರಭಾಕರ್‌

ಮೈಸೂರು: ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಪ್ರಕರಣ ಸಂಬಂಧ ಹಿಂದೂ ಸಂಘಟನೆಯ ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್ ಹೇಳಿಕೆ ನೀಡಿದ್ದು, ನನಗೆ ಗೌರಿ ಲಂಕೇಶ್‌ರೂ ಗೊತ್ತಿಲ್ಲ, ಅವರ ಅಪ್ಪನೂ ಗೊತ್ತಿಲ್ಲ. ಅವರು ಏಕೆ ನನ್ನ ಬಗ್ಗೆ ಬರೆಯುತ್ತಿದ್ದರೋ ಅದು ಸಹ ನನಗೆ ಗೊತ್ತಿಲ್ಲ. ಅವರ ಪತ್ರಿಕೆಯನ್ನು ಇದುವರೆಗೂ ನಾನು ಓದಿಲ್ಲ. ನನ್ನ ಬಗ್ಗೆ ಬರೆದಿದ್ದಕ್ಕೆ ನನಗೆ ಬೇಸರವೂ ಇಲ್ಲ. ನನಗೂ ಅವರಿಗೂ ಯಾವುದೇ ವೈಯುಕ್ತಿಕ ಭಿನ್ನಾಭಿಪ್ರಾಯ ಇರಲಿಲ್ಲ. ಏನೇ ಭಿನ್ನಾಭಿಪ್ರಾಯಗಳಿದ್ದರೂ ಸಂಘ ಪರಿವಾರ ದೈಹಿಕ ಹಿಂಸೆಯನ್ನು ಸಹಿಸುವುದಿಲ್ಲ. ಗೌರಿ ಲಂಕೇಶ್‌ ಹತ್ಯೆಯನ್ನು ಆರ್‌.ಎಸ್‌.ಎಸ್‌ ತೀವ್ರವಾಗಿ ಖಂಡಿಸುತ್ತದೆ. ದೇಶದಲ್ಲಿ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಗೌರಿ ಲಂಕೇಶ್‌ಗೂ ಬರೆಯುವ ಸ್ವಾತಂತ್ರ್ಯ ಇತ್ತು. ಆದರೆ ಅದರ ಮಿತಿ ಮೀರಿ ಬರೆಯುವುದು ಸರಿಯಲ್ಲ. ಅವರ ವಿಚಾರಗಳು ಬೇರೆ, ನಮ್ಮ ವಿಚಾರಗಳು ಬೇರೆ. ನಮ್ಮದು ರಾಷ್ಟ್ರೀಯ ವಿಚಾರವಾದ, ಅವರದ್ದು ಅರಾಷ್ಟ್ರೀಯ ವಿಚಾರವಾದ. ನಾವು ದೇಶಿಯ ಸಂಸ್ಕೃತಿಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆ. ಅವರು ದೇಶ ಮಾರುವವರ ಜೊತೆ ಇರುವುದಾಗಿ ಹೇಳಿದ್ದಾರೆ.

ಜೊತೆಗೆ ವೈಯುಕ್ತಿಕವಾಗಿ ಯಾರ ಚಾರಿತ್ರ್ಯ ವಧೆ ಮಾಡುವುದು ಸರಿಯಲ್ಲ. ಅವರ ಕೊಲೆ ಯಾವ ಕಾರಣಕ್ಕಾಗಿ ಆಗಿದೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಅವರ ಕೊಲೆಯನ್ನು ನಾನು ಖಂಡಿಸುತ್ತೇನೆ. ಹಿಂಸೆಯಿಂದ ಹಿಂಸೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಆರ್.ಎಸ್.ಎಸ್ ಎಂದೂ ಕೂಡ ಹಿಂಸೆಯನ್ನು ಬೆಂಬಲಿಸುವುದಿಲ್ಲ. ವಿಚಾರವಾದಿಗಳು ಎಂದು ಹೇಳಿಕೊಳ್ಳುವವರು ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕ ಇರಿಸಿಕೊಂಡಿದ್ದಾರೆ. ವಿದೇಶದಿಂದ ಅವರಿಗೆ ಬರುತ್ತಿರುವ ಕಮಿಷನ್ ಹಣ ತಪ್ಪಿ ಹೋಗುವ ಭಯದಿಂದ ನಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ನಾವು ಎಡ ಪಂಥೀಯರು ಅಲ್ಲ, ಬಲ ಪಂಥೀಯರು ಅಲ್ಲ, ನಾವು ರಾಷ್ಟ್ರೀಯ ವಾದಿಗಳಾಗಿದ್ದೇವೆ ಎಂದಿದ್ದಾರೆ.

One thought on “ನನಗೆ ಗೌರಿನೂ ಗೊತ್ತಿಲ್ಲ, ಅವರಪ್ಪನೂ ಗೊತ್ತಿಲ್ಲ : ಕಲ್ಲಡ್ಕ ಪ್ರಭಾಕರ್‌

  • October 21, 2017 at 2:18 AM
    Permalink

    Commander Kamagra Original viagra Can I Get Colchicine From Cananda Order Zithromax Azithromycin

Comments are closed.

Social Media Auto Publish Powered By : XYZScripts.com