ಸಿಎಂ ಸಿದ್ದರಾಮಯ್ಯ ರಾಕ್ಷಸಿ ಪ್ರವೃತ್ತಿಯುಳ್ಳ ವ್ಯಕ್ತಿ : ಕಲ್ಲಡ್ಕ ಪ್ರಭಾಕರ್‌

ಮೈಸೂರು:  ಈ ರಾಜ್ಯ ಸರ್ಕಾರ ರಾಕ್ಷಸ ಪ್ರವೃತ್ತಿಯ ಸರ್ಕಾರವಾಗಿದೆ. ಯಾರೇ ಆಗಲಿ ತಿನ್ನುವ ಅನ್ನ ಕಿತ್ತುಕೊಳ್ಳಬಾರದು. ಆದರೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮೂರೂವರೆ ಸಾವಿರ ಮಕ್ಕಳ ಅನ್ನ ಕಿತ್ತುಕೊಂಡಿದೆ ಎಂದು ಕಲ್ಲಡ್ಕ ಪ್ರಭಾಕರ್‌ ಆರೋಪಿಸಿದ್ದಾರೆ.  ಭಿಕ್ಷಾಂದೇಹಿ ಎಂಬ ಸಾಮಾಜಿಕ ಅಭಿಯಾನದ ಮೂಲಕ ಮೈಸೂರಿನಲ್ಲಿ ದೇಣಿಗೆ ರೂಪದಲ್ಲಿ ಸಂಗ್ರಹವಾಗಿದ್ದ 555 ಕ್ಕೂ ಅಕ್ಕಿ ಚೀಲಗಳನ್ನು ಪಡೆದ ಬಳಿಕ ಮಾತನಾಡಿದ ಪ್ರಭಾಕರ್‌,  ಸಿದ್ದರಾಮಯ್ಯ ರಾವಣ, ಕಂಸ, ದುರ್ಯೋಧನ ನಂತೆ ರಾಕ್ಷಸಿ ಪ್ರವೃತ್ತಿಯವರು. ಈ ಘಟನೆ ನಡೆದ ನಂತರ ನಮ್ಮ ಶಾಲೆಯ ವಿದ್ಯಾರ್ಥಿಯೋರ್ವ ಸಿದ್ದರಾಮಯ್ಯ ಅವರನ್ನು ಆಹ್ವಾನ ಮಾಡಿದ್ದಾನೆ. ನಾನೂ ಕೂಡ ಉಸ್ತುವಾರಿ ಸಚಿವರನ್ನು, ಸಿಎಂರನ್ನು ನಮ್ಮ ಶಾಲೆಗೆ ಆಹ್ವಾನ ಮಾಡುತ್ತೇನೆ. ಘಟನೆ ಬಳಿಕ ಸರ್ಕಾರ ಮತ್ತೆ ಅನುದಾನ ನೀಡಲು ಮುಂದೆ ಬಂದಿದೆ, ನಾವು ಸ್ವೀಕರಿಸಲು ಸಿದ್ದವಿಲ್ಲ. ರಾಕ್ಷಸಿ ಪ್ರವೃತ್ತಿಯುಳ್ಳವರಿಂದ ದಾನ ಪಡೆಯುವ ಅಗತ್ಯವಿಲ್ಲ. ನಮಗೆ ದಾನ ಮಾಡಲು ಸಾರ್ವಜನಿಕರಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

 

Comments are closed.