ಲಂಚ ಪ್ರಕರಣ : ಸಚಿವ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಆರೋಪಿ ಎಂದ ಕೋರ್ಟ್‌

ಮೈಸೂರು : ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗೆ ಲಂಚ ಪಡೆಯಲು ಪ್ರೇರೇಪಿಸಿದ ಪ್ರಕರಣ ಸಂಬಂಧ ಲೋಕೋಪಯೋಗಿ ಸಚಿವ ಡಾ. ಎಷ್.ಮಹದೇವಪ್ಪನವರ ಪುತ್ರ ಸುನೀಲ್ ಬೋಸ್ ಆರೋಪಿ ಎಂದು ಮೈಸೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಕಳೆದ 2010 ರಲ್ಲಿ ಭೂವಿಜ್ಞಾನ ಇಲಾಖೆ ಅಧಿಕಾರಿ ಆಲ್ಪೋನ್ಸಿಸ್ ಗೆ ಲಂಚ ಪಡೆಯಲು ಸುನಿಲ್‌ ಬೋಸ್‌ ಪ್ರೇರೆಪಿಸಿದ್ದರು. ನಂತರ 2013ರಲ್ಲಿ ವಿಚಾರಣೆ ನಡೆಸಿ ಸುನೀಲ್ ಬೋಸ್ ಮತ್ತು ರಾಜು ಹೆಸರನ್ನು ಲೋಕಾಯುಕ್ತ ಪೊಲೀಸ್‌ ಕೈಬಿಟ್ಟಿತ್ತು. ನಂತರ ಮತ್ತೆ ಇಬ್ಬರನ್ನು ಆರೋಪಿಗಳಾಗಿ ಪರಿಗಣಿಸಬೇಕೆಂದು ದೂರುದಾರ ಬಸವರಾಜು ನ್ಯಾಯಾಲಯದ ಮೊರೆ ಹೋಗಿದ್ದರು.

ಬಳಿಕ ಪ್ರಕಣರಣಲ್ಲಿ ತಮ್ಮ ಪಾತ್ರವಿಲ್ಲ ನಮ್ಮನ್ನು ಬಿಡುಗಡೆ ಮಾಡಿ ಎಂದು ಸುನಿಲ್‌ ಅರ್ಜಿ ಸಲ್ಲಿಸಲು ಕಾಲಾವಕಾಶ ಕೋರಿದ್ದರು. ಆದರೆ ಇದನ್ನು ನಿರಾಕರಿಸಿದ್ದ ನ್ಯಾಯಾಧೀಶರು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿ ಎಂದು ಆದೇಶ ನೀಡಿದ್ದರು. ಈ ಹಿನ್ನೆಲೆಯಲ್ಲಿ  ಇಂದು ವಿಚಾರಣೆ ನಡೆಸಿ ದೂರುದಾರರ ಸಾಕ್ಷಿ ಪರಿಗಣಿಸಿ ಸುನೀಲ್ ಬೋಸ್ ಆರೋಪಿ ಎಂದು ತೀರ್ಪು ನೀಡಲಾಗಿದೆ. ಜೊತೆಗೆ ಸುನೀಲ್ ಬೋಸ್ ಗೆಳೆಯ ರಾಜು ಸಹ ಪ್ರಕರಣದಲ್ಲಿ ಆರೋಪಿ ಎಂದು ಹೇಳಿದೆ.

 

ಜೊತೆಗೆ ಮೂವರು ಆರೋಪಿಗಳು ಸಹ ಇದೇ ಸೆಪ್ಟೆಂಬರ್ 26 ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸುವಂತೆ ಆದೇಶಿಸಲಾಗಿದೆ.

 

Comments are closed.