ಸಮಸ್ಯೆ ಬಂದಾಗ ಸಂಧಾನದ ಬಾಗಿಲು ಮುಚ್ಚಬಾರದು : ಸಿಎಂಗೆ ದೇವೇಗೌಡರ ಸೂಚನೆ

ಬೆಂಗಳೂರು : ಶೈಕ್ಷಣಿಕ ಸಮಸ್ಯೆಗಳಿಗೆ ಅಂತಿಮ ಪರಿಹಾರ ನೀಡಬೇಕು ಎಂದು ಪಕ್ಷಾತೀತವಾಗಿ ಎಂಎಲ್‌ಸಿಗಳು ಹೋರಾಟ ಮಾಡುತ್ತಿದ್ದಾರೆ. ಕಳೆದ 1 ವರ್ಷದಿಂದ ಸದನದ ಒಳಗೆ ಹೊರಗೆ ಇದೇ ಕೂಗು ಕೇಳಿಬರುತ್ತಿದೆ. ಆದರೆ ಸರ್ಕಾರದಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

 

ಶೈಕ್ಷಣಿಕ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಿ ವಿಧಾನ ಸೌದದ ಮುಂಭಾಗ ಎಂಎಲ್‌ಸಿಗಳು ಕಳೆದ 8 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದು, ದೇವೇಗೌಡರು ಸ್ಥಳಕ್ಕಾಗಮಿಸಿದ ವೇಳೆ ಮಾಧ್ಯಮಗಳ ಜೊತೆ ಮಾತುಕತೆ ನಡೆಸಿದ್ದಾರೆ. ವಿಧಾನಸೌಧದಲ್ಲೆ ಧರಣಿ ಮಾಡ್ತಿದ್ರು ಯಾವ ಸಚಿವರು ಬಂದಿಲ್ಲ. ಇದು ಸರ್ಕಾರಕ್ಕೆ ಶೋಭೆ ತರೋದಲ್ಲ. ಶೈಕ್ಷಣಿಕ ಸಮಸ್ಯೆಗಳಿಗೆ ಅಂತಿಮ ಪರಿಹಾರ ಆಗಬೇಕು ಅನ್ನೋದು ಇವರ ಹೋರಾಟ. 80% ಬೇಡಿಕೆಗೆ ಸರ್ಕಾರಕ್ಕೆ ಯಾವುದೇ ಹೊರೆ ಬಿಳೋದಿಲ್ಲ. ಆದ್ರೆ ಸಿಎಂ ಯಾಕೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲವೋ ಗೊತ್ತಿಲ್ಲ. ಸರ್ಕಾರ ಯಾಕೆ ಇಷ್ಡು ಕಠೋರ ನಿರ್ಧಾರ ತೆಗೆದುಕೊಂಡಿದೆಯೋ ಗೊತ್ತಿಲ್ಲ. ಸಿಎಂ ಸೌಜನ್ಯ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದೇ ವೇಳೆ ಅಧಿಕಾರ ಶಾಶ್ವತ ಅಲ್ಲ ಎಂದಿರುವ ದೇವೇಗೌಡರು, ಸಿಎಂ ವರ್ತನೆಯನ್ನು ಜನ ಒಪ್ಪುವುದಿಲ್ಲ. ವಿಧಾನಸೌಧಕ್ಕೆ ಅನೇಕ ಸಿಎಂಗಳು ಬಂದುಹೋಗಿರುವುದಾಗಿ ಹೇಳಿದ್ದಾರೆ. ಶಾಸಕರೇ ಹೀಗೆ ಹೋರಾಟ ಮಾಡಿರೋ ಇತಿಹಾಸ ನಾನು‌ ನೋಡಿಲ್ಲ. ಪ್ರತಿಭಟನೆ ಬಂದಾಗ ಪ್ರತಿನಿಧಿಗಳನ್ನ ಕಳಿಸುವ ಸಂಸ್ಕೃತಿ ಇತ್ತು.ಆದ್ರೆ ಇಲ್ಲಿ ಅದ್ಯಾವುದು ಆಗಿಲ್ಲ. ಸಿದ್ದರಾಮಯ್ಯ ಸರ್ಕಾರಕ್ಕೆ ಕಠಿಣ ಮನಸ್ಸಿದೆ. ಸರ್ಕಾರದ ನಿಲುವು ರಾಜ್ಯದ ಜನಕ್ಕೆ ಗೊತ್ತಾಗುತ್ತೆ. ಸಮಸ್ಯೆ ಬಂದಾಗ ಸಂಧಾನದ ಬಾಗಿಲು ಮುಚ್ಚಬಾರದು ಎಂದಿದ್ದಾರೆ.

 

 

 

 

Social Media Auto Publish Powered By : XYZScripts.com