ಕೂದಲೆಳೆಯ ಅಂತರದಲ್ಲಿ ಪಾರಾದ ಸುರೇಶ್ ರೈನಾ, ತಪ್ಪಿದ ಅನಾಹುತ..

ಟೀಮ್ ಇಂಡಿಯಾದ ಎಡಗೈ ಬ್ಯಾಟ್ಸಮನ್ ಸುರೇಶ್ ರೈನಾ ಕೂದಲೆಳೆಯ ಅಂತರದಲ್ಲಿ ಭಾರೀ ಅಪಘಾತದಿಂದ ಪಾರಾಗಿದ್ದಾರೆ. ಮಂಗಳವಾರ ಗಾಜಿಯಾಬಾದ್ ನಿಂದ ಕಾನ್ಪುರಕ್ಕೆ ತೆರಳುತ್ತಿದ್ದ ವೇಳೆ ಇಟಾವಾದ ಬಳಿ, ರೈನಾ ಪಯಣಿಸುತ್ತಿದ್ದ ರೇಂಜ್ ರೋವರ್ ಕಾರಿನ ಟೈರ್ ಬರ್ಸ್ಟ್ ಆಗಿದೆ. ಅದೃಷ್ಟವಶಾತ್ ಕಾರಿನ ವೇಗ ಕಡಿಮೆ ಇದ್ದದ್ದರಿಂದ, ದೊಡ್ಡ ಅನಾಹುತ ತಪ್ಪಿದಂತಾಗಿದೆ.

Image result for raina accident

ವಾಹನದ ವೇಗ ಹೆಚ್ಚಿದ್ದರೆ, ಅಪಾಯ ಉಂಟಾಗುವ ಸಾಧ್ಯತೆಯಿತ್ತೆಂದು ಪೋಲೀಸರು ತಿಳಿಸಿದ್ದಾರೆ. ಪೋಲೀಸರು ಕೂಡಲೇ ಬೇರೆ ವಾಹನದ ವ್ಯವಸ್ಥೆ ಮಾಡಿದ್ದಾರೆ. ಘಟನೆ ಮಧ್ಯರಾತ್ರಿ 2 ಗಂಟೆಯ ಸುಮಾರಿಗೆ ನಡೆದಿದ್ದು, ಸುರೇಶ್ ರೈನಾಗೆ ಯಾವುದೇ ಗಾಯಗಳಾಗಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ. ಪೋಲೀಸರು ಕೂಡಲೇ ಬೇರೆ ವಾಹನದ ವ್ಯವಸ್ಥೆ ಮಾಡಿದ್ದಾರೆ.

 

Comments are closed.

Social Media Auto Publish Powered By : XYZScripts.com