‘ ಬಹುತ್ವ.. ಬಹುತ್ವ.. ಇದೇ ನಮ್ಮ ದೇಶದ ಕರ್ಮ ‘ : ದೇವನೂರು ಮಹಾದೇವ

ಗೌರಿ ಹತ್ಯೆಯನ್ನು ಪ್ರತಿರೋಧಿಸಿ ಇಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಸಹಸ್ತ್ರಾರು ಸಂಖ್ಯೆಯಲ್ಲಿ ಹರಿದು ಬಂದಿದ್ದ ಜನಸ್ತೋಮ ವ್ಯಾಪಕ ಖಂಡನೆಯನ್ನು ವ್ಯಕ್ತಪಡಿಸಿದರು. ಗಣ್ಯಾತಿಥಿಗಳು ಭಾಗವಹಿಸಿದ್ದ ವೇದಿಕೆಯಲ್ಲಿ ಮಾತನಾಡಿದ ದೇವನೂರು ಮಹಾದೇವ ಹತ್ಯೆಯನ್ನು ಖಂಡಿಸಿ “ಬಹುತ್ವ.. ಬಹುತ್ವ.. ಇದೇ ನಮ್ಮ ಕರ್ಮ, ಭೂತವನ್ನೆ ಮತ್ತೆ ವರ್ತಮಾನ ಮಾಡುತ್ತಿರುವ ಸರ್ಕಾರ ಜಡಸ್ಥಿತಿಗೆ ಮರುಳುತ್ತಿದೆ” ಎಂದರು.

ಅವರ ಮಾತಿಗೆ ಪುಷ್ಟಿ ನೀಡಿದ ಚಂಪಾ ರವರು “ ಪ್ರಶ್ನೋತ್ತರ ” ಕವಿತೆಯ ವಾಚನದ ಮೂಲಕ ಸತ್ತವರು ಎಲ್ಲಿಗೆ ಹೋಗುತ್ತಾರೆ..? ಪ್ರಶ್ನೆಗೆ ಎಲ್ಲಿಯೂ ಹೋಗುವುದಿಲ್ಲ ನಮ್ಮೊಡನೆಯೆ ನಮ್ಮಂತಾಗಿರುತ್ತಾರೆ ಎಂದು ಉತ್ತರಿಸಿದರು. “ನಮ್ಮ ದೇಶದಲ್ಲಿ ಗೌರಿ ಲಂಕೇಶ್ ರಂತಹ ಚಿಂತಕರು ಇದ್ದಿದ್ದರಿಂದಲೇ ಪ್ರಜಾಪ್ರಭುತ್ವ ಇನ್ನೂ ಊಳಿದಿದೆ” ಎಂದು ಮೇಧಾ ಪಾಟ್ಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ಜೊತೆಗೆ ನಟ ಚೇತನ್ “ಗೌರಿಯವರಿಂದ ಹೆಚ್ಚು ಕಲಿತಿದ್ದೇನೆ” ಎಂದು ಅವರೊಂದಿಗೆ ಕಳೆದ ಹೋರಾಟದ ಕ್ಷಣಗಳನ್ನು ಸ್ಮರಿಸಿದರು. ಉಪಸ್ಥಿತರಿದ್ದ ತೀಸ್ಥಾ ಸೆತಲ್ವಾರ್ “ಗೌರಿ ಸಾವನ್ನು ವ್ಯರ್ಥವಾಗಲಿಕ್ಕೆ ಬಿಡದೆ, ನ್ಯಾಯ ಪಡೆವ ಹಾದಿಯಲ್ಲಿ ಮುನ್ನುಗ್ಗಬೇಕಾಗಿದೆ” ಎಂದರು.

Comments are closed.

Social Media Auto Publish Powered By : XYZScripts.com