ಮೊಟ್ಟಮೊದಲ ಬಾರಿಗೆ ಕಿರುತೆರೆಯಲ್ಲಿ ಅಬ್ಬರಿಸಲಿದೆ ಕಿಚ್ಚನ ‘ಹೆಬ್ಬುಲಿ’

ಕಿಚ್ಚ ಸುದೀಪ್ ನ ಇತ್ತೀಚಿನ ಟ್ರೆಂಡ್ ಸೆಟ್ಟಿಂಗ್ ಸಿನಿಮಾ ಎಂದರೆ ಅದು ಹೆಬ್ಬುಲಿ. ಈ ಚಿತ್ರ ಸೆಟ್ಟೇರಿದ್ದ ದಿನದಿಂದ ಬಿಡುಗಡೆಯಾದ ಬಹುಕಾಲದವರೆಗೂ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದು ಸುಳ್ಳಲ್ಲ. ಈ ಚಿತ್ರವನ್ನು ಜೀ ಕನ್ನಡ ವಾಹಿನಿ ಇದೀಗ ನಿಮ್ಮ ಮನೆಯ ಟಿವಿ ಪರದೆಯ ಮೇಲೆ ತರುತ್ತಿದೆ.
ವಿಶೇಷ ಅಂದ್ರೆ, ಕಿಚ್ಚ ಸುದೀಪ್ ಮೊಟ್ಟಮೊದಲ ಬಾರಿಗೆ ಪ್ರೇಕ್ಷಕರೊಂದಿಗೆ ಕೂತು ಸಿನಿಮಾ ನೋಡಲಿದ್ದಾರೆ. ಪ್ರತಿ ಬ್ರೇಕ್ ನಲ್ಲೂ ಸುದೀಪ್ ನಿಮ್ಮನ್ನ ರಂಜಿಸುತ್ತಾರೆ. ಜೊತೆಗೆ ನಿಮ್ಮೊಂದಿಗೆ ಮಾತೂ ಆಡ್ತಾರೆ. ಚಿತ್ರದ ಬಗ್ಗೆ ಮಾಹಿತಿ ಕೊಡ್ತಾರೆ. ತಮ್ಮ ಕೋ-ಸ್ಟಾರ್ ರವಿಚಂದ್ರನ್ ಅವ್ರ ಬಗ್ಗೆ ಇಂಟ್ರೆಸ್ಟಿಂಗ್ ಸ್ಟೋರಿ ಹೇಳ್ತಾರೆ. ಅಲ್ಲಲ್ಲಿ ಚಿತ್ರೀಕರಣದ ಅನುಭವಗಳನ್ನೂ ಹಂಚಿಕೊಳ್ತಾರೆ.
ಇನ್ನು ಸಿನಿಮಾ ಬಗ್ಗೆ ಹೇಳೋದಾದ್ರೆ ,  ಸುದೀಪ್ ವಿಭಿನ್ನ ಹೇರ್ ಸ್ಟೈಲ್ ನಿಂದ ಹಿಡಿದು ಅಮಲಾ ಪೌಲ್ ಎನ್ನುವ ಬಹುಭಾಷಾ ಸುಂದರಿಯನ್ನು ಕನ್ನಡದ ಪ್ರೇಕ್ಷಕನಿಗೆ ಪರಿಚಯಿಸುವವರೆಗೆ ಹೆಬ್ಬುಲಿ ಎಲ್ಲದರಲ್ಲೂ ವಿಶೇಷವಾಗಿ ನಿಂತ ಸಿನಿಮಾ. ಮುಂಗಾರು ಮಳೆ ಚಿತ್ರದ ಛಾಯಾಗ್ರಹಕರಾಗಿ ಮನೆಮಾತಾದ ಕೃಷ್ಣ ಹೆಬ್ಬುಲಿಗೆ ಆಕ್ಷನ್ ಕಟ್ ಹೇಳಿರೋದು ವಿಶೇಷ.
ಸುದೀಪ್ ಅಭಿಮಾನಿಗಳಿಗೆ ಅವರ ಈ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಹೆಬ್ಬುಲಿ ಹೆಚ್ಚು ಇಷ್ಟ. ಇದಕ್ಕೆ ಹಲವಾರು ಕಾರಣಗಳಿವೆ. ಒಂದು ಸುದೀಪ್ ಹಿಂದೆಂದಿಗಿಂತಲೂ ಹೆಚ್ಚು ಸ್ಟೈಲಿಷ್ ಆಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಎರಡನೇ ಬಾರಿಗೆ ಜೊತೆಯಾಗಿ ತೆರೆ ಹಂಚಿಕೊಂಡಿರುವ ಚಿತ್ರ ಇದು. ಸಾಮಾಜಿಕ ಬದ್ಧತೆ ಇರುವ ನಟ ಎಂದೇ ಗುರುತಿಸಿಕೊಂಡಿರುವ ಕಿಚ್ಚ ಹೆಬ್ಬುಲಿಯಲ್ಲಿ ಒಬ್ಬ ಯೋಧನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ರವಿಚಂದ್ರನ್ ಸುದೀಪ್ ಗೆ ಅಣ್ಣನಾಗಿ ಅಭಿನಯಿಸಿದ್ದಾರೆ.
ಇದೊಂದು ಪಕ್ಕಾ ಆ್ಯಕ್ಷನ್ ಸಿನಿಮಾ. ನಾಯಕ ಯೋಧ ಅಂದಮೇಲೆ ಅಲ್ಲಿ ಸಾಹಸಕ್ಕೇನೂ ಕೊರತೆ ಇರೋದೇ ಇಲ್ಲ. ಎಲ್ಲಾ ಫೈಟ್ ಗಳಲ್ಲೂ ಸುದೀಪ್ ತಮ್ಮದೇ ಮ್ಯಾನರಿಸಂನಲ್ಲಿ ಅಬ್ಬರಿಸ್ತಾರೆ.  ಇನ್ನು ನಾಯಕಿ ಅಮಲಾ ಪೌಲ್ ವೀಕ್ಷಕರ ಕಣ್ಮನ ತಣಿಸುತ್ತಾರೆ. ಸುಂದರ ಹಾಡುಗಳು, ಅದನ್ನು ಚಿತ್ರೀಕರಿಸಿರುವ ಅದ್ಭುತ ಲೊಕೇಶನ್ಸ್ ಇವೆಲ್ಲವೂ ವೀಕ್ಷಕರನ್ನು ಹಿಡಿದಿಡುವುದರಲ್ಲಿ ಯಶಸ್ವಿಯಾಗುವುದು ಖಂಡಿತಾ.
ಅನೇಕರು ಈಗಾಗಲೇ ಥಿಯೇಟರ್‌ ನಲ್ಲಿ ಹೆಬ್ಬುಲಿ ನೋಡಿರಬಹುದು. ಅವರೆಲ್ಲರೂ ಮತ್ತೊಮ್ಮೆ ಸುದೀಪ್ ಘರ್ಜನೆ ನೋಡೋ ಬಯಕೆ ಹೊಂದಿರೋದು ಗ್ಯಾರಂಟಿ. ಜೀ ವಾಹಿನಿ ನಿಮ್ಮ ಮನೆಮಂದಿಯ ಜೊತೆ ಹೆಬ್ಬುಲಿಯನ್ನು ನೋಡಿ ಎಂಜಾಯ್ ಮಾಡುವ ಅವಕಾಶ ನೀಡುತ್ತಿದೆ.
ಕಿಚ್ಚ ಸುದೀಪ್, ಅಮಲಾ ಪೌಲ್, ಕ್ರೇಜಿ ಸ್ಟಾರ್ ರವಿಚಂದ್ರನ್, ರವಿಶಂಕರ್ ಮುಂತಾದ ಕಲಾವಿದರ ದೊಡ್ಡ ದಂಡೇ ಹೆಬ್ಬುಲಿಯಲ್ಲಿದೆ. ಇದೇ ಪ್ರಪ್ರಥಮ ಬಾರಿಗೆ ಕಿರುತೆರೆಯಲ್ಲಿ ಘರ್ಜಿಸಲಿರುವ ಹೆಬ್ಬುಲಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಶನಿವಾರ ರಾತ್ರಿ 7.30 ಕ್ಕೆ ಪ್ರಸಾರ ಆಗಲಿದೆ.

Comments are closed.