‘ 2019 ರಲ್ಲಿ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಸಿದ್ಧನಿದ್ದೇನೆ ‘ : ರಾಹುಲ್ ಗಾಂಧಿ

ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಎರಡು ವಾರಗಳ ಅಮೇರಿಕಾ ಪ್ರವಾಸದಲ್ಲಿದ್ದಾರೆ. ಬೆರ್ಕೆಲಿ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ರಾಹುಲ್ ಗಾಂಧಿ ‘ 2019 ರ ರಾಷ್ಟ್ರೀಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ, ಪ್ರಧಾನ ಮಂತ್ರಿ ಅಭ್ಯರ್ಥಿಯಾಗಲು ಸಿದ್ಧನಿದ್ದೇನೆ ‘ ಎಂದು ಹೇಳಿದ್ದಾರೆ. ಮಾಡರೇಟರ್ ಒಬ್ಬರು ನೀವು ಕಾಂಗ್ರೆಸ್ ಪಕ್ಷದ ಪ್ರಧಾನ ಮಂತ್ರಿಯಾಗಲು ಸಿದ್ಧರಿದ್ದೀರಾ ಎಂಬ ಪ್ರಶ್ನೆಗೆ ‘ಹೌದು, ನಾನು ಅದಕ್ಕೆ ಖಂಡಿತವಾಗಿಯೂ ಸಿದ್ಧನಿದ್ದೇನೆ ‘ ಎಂದು ಹೇಳಿದ್ದಾರೆ. ನಮ್ಮದು ಒಂದು ಸಾಂಸ್ಥಿಕ ಪಕ್ಷವಾಗಿದ್ದು, ‘ ಅಭ್ಯರ್ಥಿ ಯಾರಾಗಬೇಕೆಂಬ ನಿರ್ಧಾರವನ್ನು ಪಕ್ಷವೇ ಕೈಗೊಳ್ಳಬೇಕಿದೆ. ಅದರ ಕುರಿತ ಚರ್ಚೆ ಜಾರಿಯಲ್ಲಿದೆ ‘ ಎಂದು ಹೇಳಿದ್ದಾರೆ.
ಇದೇ ವೇಳೆ ಮೋದಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ‘ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಕೋಮದ್ವೇಷ, ಹಿಂಸೆ, ಜಾತಿ ಧರ್ಮಗಳ ನಡುವೆ ಒಡಕು ಮೂಡಿಸುತ್ತಿದ್ದಾರೆ ‘ ಎಂದು ಆರೋಪಿಸಿದ್ಧಾರೆ.

Comments are closed.

Social Media Auto Publish Powered By : XYZScripts.com