ವಿಚ್ಛೇದನ ಕೇಳಿದ ಪತ್ನಿಗೆ ಪತಿ ಮಹಾಶಯ ನೀಡಿದ ಉಡುಗೊರೆಯೇನು..?

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿನ ಶಾಂತಿನಗರದ ನಿವಾಸಿಯಾಗಿದ್ದ ರೋಜಿಬಾಯ್ ಮೇಲೆ ಗಂಡ ಶಾಂತಾನಾಯಕ್  ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ೬ ವರ್ಷದ ಹಿಂದೆ ವಿವಾಹವಾಗಿದ್ದ  ದಂಪತಿಗಳ ನಡುವೆ ಕಲಹ ಉಂಟಾಗಿ ವಿವಾಹ ವಿಚ್ಛೇದನಕ್ಕಾಗಿ ದೊಡ್ಡಬಳ್ಳಾಪುರ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದ ಪತ್ನಿಯ ನಡೆಯಿಂದ ಕುಪಿತನಾದ ಪತಿ ಹಲ್ಲೆ ನಡೆಸಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗಾಯಾಳು ರೋಜಿಬಾಯ್ ಳನ್ನು ದೊಡ್ಡಬಳ್ಳಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿದೆ.

 

 

3 thoughts on “ವಿಚ್ಛೇದನ ಕೇಳಿದ ಪತ್ನಿಗೆ ಪತಿ ಮಹಾಶಯ ನೀಡಿದ ಉಡುಗೊರೆಯೇನು..?

Comments are closed.

Social Media Auto Publish Powered By : XYZScripts.com