US Open TENNIS : ಹಿಂಗಿಸ್ – ಚಾನ್ ಜೋಡಿಗೆ ಮಹಿಳೆಯರ ಡಬಲ್ಸ್ ಕಿರೀಟ

ಸ್ವಿಟ್ಜರ್ಲೆಂಡಿನ ಮಾರ್ಟಿನಾ ಹಿಂಗಿಸ್ ಹಾಗೂ ತೈವಾನ್ ದೇಶದ ಚಾನ್ ಯುಂಗ್ ಜಾನ್ ಜೋಡಿ, ಯುಎಸ್ ಓಪನ್ ಟೆನಿಸ್ ಟೂರ್ನಿಯ, ಮಹಿಳೆಯರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ರವಿವಾರ ನಡೆದ ಫೈನಲ್ ಪಂದ್ಯದಲ್ಲಿ ಲೂಸಿ ಹಾಗೂ ಸಿನಿಯಾಕೋವಾ ಜೋಡಿಯ ವಿರುದ್ಧ ಎರಡು ಸೆಟ್ ಗಳಲ್ಲಿ 6-3, 6-2 ಪಾಯಿಂಟ್ಗಳಿಂದ ಜಯಗಳಿಸಿದ್ಧಾರೆ. ಇದು ಮಾರ್ಟಿನಾ ಹಿಂಗಿಸ್ ಅವರ 25ನೆಯ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಯಾಗಿದ್ದು, 13ನೆಯ ಡಬಲ್ಸ್ ಪ್ರಶಸ್ತಿಯಾಗಿದೆ. ಪ್ರಶಸ್ತಿಯ ಮೊತ್ತ 675000 ಯುಎಸ್ ಡಾಲರ್ಸ್ ಅನ್ನು ಇಬ್ಬರೂ ಆಟಗಾರ್ತಿಯರು ಹಂಚಿಕೊಂಡಿದ್ಧಾರೆ.

Comments are closed.

Social Media Auto Publish Powered By : XYZScripts.com