ಇರ್ಮಾ ಚಂಡಮಾರುತಕ್ಕೆ ನಾಪತ್ತೆಯಾಗೋಯ್ತು ಸಮುದ್ರ?!!

ಫೋರಿಡಾ : ವಿಶ್ವದಾದ್ಯಂತ ತನ್ನ ಭೀಕರತೆ ತೋರಿಸುತ್ತಿರುವ ಇರ್ಮಾ ಚಂಡಮಾರುತ ಫ್ಲೋರಿಡಾಕ್ಕೆ ಕಾಲಿಟ್ಟಿದೆ. ಕೆರಿಬಿಯನ್‌ ದ್ಪೀಪದಲ್ಲಿ 30 ಮಂದಿಯನ್ನು ಬಲಿಪಡೆದು ಫ್ಲೋರಿಡಾಕ್ಕೆ ಕಾಲಿಟ್ಟಿರುವ ಇರ್ಮಾ ಚಂಡ ಮಾರುತದಿಂದಾಗಿ ತಂಪಾ ಬೀಚ್ ನಾಪತ್ತೆಯಾಗಿರುವುದಾಗಿ ವರದಿಯಾಗಿದೆ.

ಇರ್ಮಾ ಚಂಡಮಾರುತ ಫ್ಲೋರಿಡಾಕ್ಕೆ ಕಾಲಿಡುತ್ತಿದ್ದಂತೆ ಭೀಕರತೆ ಸೃಷ್ಟಿ ಮಾಡಿದೆ. ತೆಂಪಾದ ಬಹಮಾಸ್‌ ಬೀಚ್‌ನಲ್ಲಿ ನೀರು ಪ್ರವಾಹದ ರೂಪದಲ್ಲಿ ಹರಿದು ಹೋಗಿದ್ದು, ಇಡೀ ಸಮುದ್ರವೇ ಖಾಲಿಯಾಗಿದೆ. ಈ ಕುರಿತು ತಜ್ಞರು ಹೇಳಿಕೆ ನೀಡಿದ್ದು, ಚಂಡ ಮಾರುತದ ರಭಸಕ್ಕೆ ಸಿಕ್ಕಿ ನೀರು ಕಿಲೋಮೀಟರ್‌ಗಟ್ಟಲೆ ಖಾಲಿಯಾಗುವುದು ಪ್ರಾಕೃತಿಕ ಕ್ರಿಯೆ. ಈ ರೀತಿ ಅನೇಕ ಬಾರಿ ನಡೆದಿದೆ. ಖಾಲಿಯಾದ ನೀರು ಕೆಲವೊಮ್ಮೆ ಒಂದೇ ರಾತ್ರಿಗೆ ಭರ್ತಿಯಾಗುತ್ತದೆ. ಕೆಲವೊಮ್ಮೆ ನೀರು ತುಂಬಲು ವರ್ಷಾನುಗಟ್ಟಲೆ ಬೇಕಾಗುತ್ತದೆ ಎಂದಿದ್ದಾರೆ.

 

ಇರ್ಮಾ ಚಂಡಮಾರುತ ಅಪ್ಪಳಿಸಿರುವ ಹಿನ್ನೆಲೆಯಲ್ಲಿ ಅಮೆರಿಕದ ಜನತೆಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಈ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದು, ಹವಾಮಾನ ಇಲಾಖೆಯ ಸೂಚನೆಯನ್ನು ಎಲ್ಲರೂ ಪಾಲಿಸಿ. ದೇವರು ಒಳ್ಳೆಯದು ಮಾಡಲಿ ಎಂದು ಬರೆದುಕೊಂಡಿದ್ದಾರೆ.

 

 

 

 

 

 

Comments are closed.

Social Media Auto Publish Powered By : XYZScripts.com