WATCH ; ‘ ಬೌಲರ್ ಮಾಡಿದ ಅವಮಾನಕ್ಕೆ ಬ್ಯಾಟ್ಸಮನ್ ‘ರಿವೆಂಜ್’ : ವಿಲಿಯಮ್ಸ್ vs ವಾಲ್ಟನ್

ಕೆರೆಬಿಯನ್ ಪ್ರಿಮಿಯರ್ ಲೀಗ್ ನಲ್ಲಿ ಜಮೈಕಾ ತಲ್ಲವಾಹ್ಸ್ ತಂಡದ ಪರವಾಗಿ ಆಡುವ ಕೆಸ್ರಿಕ್ ವಿಲಿಯಮ್ಸ್ ಎಂಬ ಬೌಲರ್ ಪ್ರತಿ ವಿಕೆಟ್ ಪಡೆದಾಗಲೂ, ವಿಭಿನ್ನ ರೀತಿಯಲ್ಲಿ ಸಂಭ್ರಮಿಸುತ್ತಾರೆ. ಅಂದರೆ ಒಬ್ಬೊಬ್ಬ ಬ್ಯಾಟ್ಸಮನ್ ನನ್ನು ಔಟ್ ಮಾಡಿದಾಗಲೂ, ನೋಟ್ ಬುಕ್ ನಲ್ಲಿ ಬರೆದು ದಾಖಲಿಸಿಕೊಳ್ಳುವಂತೆ ನಟಿಸುತ್ತಾರೆ. ಗಯಾನಾ ಅಮೇಜಾನ್ ವಾರಿಯರ್ಸ್ ತಂಡದ ಪರವಾಗಿ ಆಡುವ ಚಾಡ್ವಿಕ್ ವಾಲ್ಟನ್ ಅವರ ವಿಕೆಟ್ ಪಡೆದಾಗಲೂ ಇದೇ ರೀತಿ ಸಂಭ್ರಮಿಸಿ ಪೆವಿಲಿಯನ್ ದಾರಿ ತೋರಿಸಿದ್ದಾರೆ. ಆ ಸಮಯದಲ್ಲಿ ಸುಮ್ಮನಿದ್ದ ವಾಲ್ಟನ್ ಮುಂದಿನ ಪಂದ್ಯದಲ್ಲಿ ಭರ್ಜರಿ ಸೇಡು ತೀರಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 1 ರಂದು ನಡೆದ ಜಮೈಕಾ ಹಾಗೂ ಗಯಾನಾ ನಡುವಿನ ಪಂದ್ಯದಲ್ಲಿ ವಾಲ್ಟನ್, 40 ಎಸೆತಗಳಲ್ಲಿ 84 ರನ್ ಸಿಡಿಸಿದ್ದಾರೆ, ವಿಲಿಯಮ್ಸ್ ಎಸೆದ 4ನೇ ಓವರಿನ ಮೊದಲ ನಾಲ್ಕು ಎಸೆತಗಳಲ್ಲಿ 4, 4NB, 6, 4 ಬಾರಿಸಿದರು. ಅಷ್ಟಕ್ಕೇ ಸುಮ್ಮನಾಗದೇ 10 ನೇ ಓವರಿನಲ್ಲಿಯೂ ಒಂದು ಬೌಂಡರಿ ಹಾಗೂ ಒಂದು ಸಿಕ್ಸರ್ ಬಾರಿಸಿದ್ದಾರೆ. ಪ್ರತಿ ಬಾರಿ ಬೌಂಡರಿ, ಸಿಕ್ಸರ್ ಹೊಡೆದಾಗಲೆಲ್ಲ ನೋಟ್ಬುಕ್ ನಲ್ಲಿ ಬರೆದುಕೊಳ್ಳುತ್ತಿರುವಂತೆ ನಟಿಸಿ, ಬೌಲರ್ ಗೆ ತಕ್ಕ ಉತ್ತರ ನೀಡಿದ್ದಾರೆ. ಅತ್ತೆಗೊಂದು ಕಾಲ ಸೊಸೆಗೊಂದು ಕಾಲ ಅನ್ನುವಂತೆ, ‘ ವಿಲಿಯಮ್ಸ್ ಗೊಂದು ಕಾಲ, ವಾಲ್ಟನ್ ಗೊಂದು ಕಾಲ ‘ ಅನ್ನುವಂತಾಗಿದೆ.

ಬೌಲರ್ ಮಾಡಿದ ಅವಮಾನ, ಅದಕ್ಕೆ ಬ್ಯಾಟ್ಸಮನ್ ಉತ್ತರ.. ಇಲ್ಲಿದೆ ವಿಡಿಯೋ..

Perfect defination of Karma . Never take panga with windies cricketers ? watch till end .please Like Troll PSL for more cricket stuff

Posted by Troll PSL on Friday, September 8, 2017

Comments are closed.

Social Media Auto Publish Powered By : XYZScripts.com