Health : ತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸರಳ – ಆರೋಗ್ಯಕರ ವಿಧಾನ

ಈಗಿನ ದಿನಮಾನಗಳಲ್ಲಿ ಜನರಿಗೆ ಕಾಡುವ ಅನೇಕ ಸಮಸ್ಯೆಗಳಲ್ಲಿ ದಪ್ಪಗಿರುವುದೂ, ಹೆಚ್ಚು ತೂಕ ಹೊಂದಿರುವುದಾಗಿದೆ. ಬಹಳಷ್ಟು ಜನರಿಗೆ ತಮ್ಮ ತೂಕ ಕಡಿಮೆ ಮಾಡಿಕೊಳ್ಳಬೇಕು, ತಾವೂ ಎಲ್ಲರಂತೆ ಸ್ಲಿಮ್ ಆಗಿ ಕಾಣಿಸಬೇಕು ಎಂಬ ಆಸೆ ಇರುತ್ತೆ. ಆದರೆ ಏನೇ ವಿಧಾನಗಳನ್ನು ಮಾಡಿದರೂ ತೂಕ ಮಾತ್ರ ಕಡಿಮೆಯಾಗಿರಲ್ಲ.. ಅಂತವರು ಈ ಸರಳ ಉಪಾಯವನ್ನೊಮ್ಮೆ ಪ್ರಯೋಗಿಸಿ ನೋಡಿದರೆ ನಷ್ಟವೇನಿಲ್ಲ.

Image result for obesity pictures lemon water honey  Image result for over weight reduce lemon

ಒಂದು ಲೋಟ ನೀರಿಗೆ ನಿಂಬೆ ಹಣ್ಣಿನ ರಸ  ಹಾಗೂ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಕುಡಿದು ಪ್ರಯತ್ನಿಸಬಹುದು. ಇದು ಅತ್ಯಂತ ಪ್ರಭಾವಶಾಲಿ ವಿಧಾನ ಎಂದು ಅನೇಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಇದರೊಂದಿಗೆ ಆರೋಗ್ಯಕರ ಡಯೆಟ್, ದೈಹಿಕ ವ್ಯಾಯಾಮ, ನಿಯಮಿತ ವಾಕಿಂಗ್ ಮಾಡುವುದನ್ನು ರೂಢಿಸಿಕೊಂಡರೆ ಇನ್ನೂ ಹೆಚ್ಚಿನ ಲಾಭವಾಗುತ್ತದೆ. ಅತಿಯಾದ ಕರಿದ ಪದಾರ್ಥಗಳ ಸೇವನೆ, ಜಂಕ್ ಫುಡ್ ಇವುಗಳಿಂದ ದೂರವಿರುವುದೇ ಉತ್ತಮ ಎನ್ನುತ್ತಾರೆ ತಜ್ಞರು..

ಈ ವಿಧಾನ ತೂಕ ಕಡಿಮೆ ಮಾಡುವುದಷ್ಟೆ ಅಲ್ಲ, ಇದರಿಂದ ಇನ್ನೂ ಅನೇಕ ಲಾಭಗಳಿವೆಯೆಂದು ಹೇಳಲಾಗುತ್ತದೆ.

1) ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ.

2) ಮಲಬದ್ಧತೆಯನ್ನು ನಿವಾರಿಸುತ್ತದೆ.

3)  ಪಿತ್ತಕೋಶವನ್ನು ಸ್ವಚ್ಛಗೊಳಿಸುತ್ತದೆ.

4)  ಚರ್ಮದ ಆರೋಗ್ಯ ಕಾಪಾಡುತ್ತದೆ.

Comments are closed.

Social Media Auto Publish Powered By : XYZScripts.com