ಸೂಪರ್ ಹಿಟ್ ‘ಪೋಕಿರಿ’ ಚಿತ್ರಕ್ಕೆ ನಿರ್ದೇಶಕರ ಆಯ್ಕೆ ಮಹೇಶ್ ಬಾಬು ಅಲ್ವಂತೆ..!?

ಸೌತ್ ಸಿನಿ ಇಂಡಸ್ಟ್ರಿಲಿ ದಾಖಲೆ ಬರೆದ ಸಿನಿಮಾ ಪೋಕಿರಿ. ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮಹೇಶ್ ಬಾಬು ಅಭಿನಯದ ಈ ಆಕ್ಷನ್ ಎಂಟಟ್ರೈನರ್ ಸೂಪರ್ ಹಿಟ್ ಆಗಿತ್ತು. ಮುಂದೆ ಈ ಸಿನಿಮಾ ಕಾಲಿವುಡ್, ಬಾಲಿವುಡ್ ಮತ್ತು ಕನ್ನಡದಲ್ಲೂ ರೀಮೇಕ್ ಆಗಿ‌ ಸಕ್ಸಸ್ ಆಯ್ತು. ಇತ್ತೀಚೆಗೆ ನಿರ್ದೇಶಕ ಪೂರಿ ಜಗನ್ನಾಥ್ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡುತ್ತಾ ಪೋಕಿರಿ ಸಿನಿಮಾ ಕಥೆ ಮಹೇಶ್ ಬಾಬುಗಾಗಿ ಬರೆದಿದ್ದಲ್ಲ. ನನ್ನ ಮೊದಲ ಆಯ್ಕೆ ಅವರಾಗಿರಲಿಲ್ಲ ಅಂತ ತಿಳಿಸಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಈ ಚಿತ್ರದಲ್ಲಿ ನಟಿಸಬೇಕಿತ್ತಂತೆ. ಪವನ್ ಕಲ್ಯಾಣ್ಗೋಸ್ಕರ ಈ ಕಥೆ ಸಿದ್ಧಪಡಿಸಿದ್ರಂತೆ ಪೂರಿ ಜಗನ್ನಾಥ್. ಕಥೆಯನ್ನ ಪವನ್ ಅವರಿಗೂ ಹೇಳಿದ್ರಂತೆ. ಪವನ್ ಕಥೆ ಇಷ್ಟಪಟ್ರು ಯಾಕೆ ಆ ಚಿತ್ರದಲ್ಲಿ ನಟಿಸೋಕೆ ಸಾಧ್ಯವಾಗಿರಲಿಲ್ಲವಂತೆ. ಆ ನಂತ್ರ ಕಥೆಯನ್ನ ಪ್ರಿನ್ಸ್ ಮಹೇಶ್ ಬಾಬುಗೆ ಹೇಳಿ ಸಿನಿಮಾ ಮಾಡಿ ಪೂರಿ ಜಗನ್ನಾಥ್ ಗೆದ್ರು. ಪೋಕಿರಿ ಮಾತ್ರವಲ್ಲ, ರವಿತೇಜಾ ಮತ್ತು ಪೂರಿ ಜಗನ್ನಾಥ್ ಜೋಡಿಯ ಈಡಿಯಟ್ ಮತ್ತು ಅಮ್ಮ ನಾನ ಓ ತಮಿಳು ಅಮ್ಮಾಯಿ ಚಿತ್ರಗಳಲ್ಲೂ ಪವನ್ ಕಲ್ಯಾಣ್ ಹೀರೋ ಆಗಿ ನಟಿಸಬೇಕಿತ್ತಂತೆ. ಈ ವಿಚಾರವನ್ನೂ ಪೂರಿ ಸಂದರ್ಶನದಲ್ಲಿ ಹೇಳಿದ್ದಾರೆ.
ಪವನ್ ಕಲ್ಯಾಣ್ ಅಭಿನಯದ ಬದ್ರಿ ಚಿತ್ರಕ್ಕೆ ಪೂರಿ ಜಗನ್ನಾಥ್ ಆಕ್ಷನ್ ಕಟ್ ಹೇಳಿ ಗೆದ್ದಿದ್ದಾರೆ. ಆ ನಂತ್ರ ಸಾಕಷ್ಟು ಬಾರಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡೊ ಮಾತುಗಳು ಕೇಳಿ ಬಂತಾದ್ರೂ, ಅಂತಾದೊಂದು ಸಿನಿಮಾ ಬರಲೇಯಿಲ್ಲ. ಈಡಿಯಟ್, ಅಮ್ಮ ನಾನ ಓ ತಮಿಳ್ ಅಮ್ಮಾಯಿ, ಪೋಕಿರಿ ಸಿನಿಮಾಗಳ ಸಮಯದಲ್ಲೂ ಇದೇ ರೀತಿ ಪ್ರಚಾರ ಆಯ್ತು. ಕಥೆ ಕೇಳಿ ಒಪ್ಪಿದ್ರೂ, ಯಾಕೊ ಪವನ್ ಮಾತ್ರ ನಟಿಸಿರಲಿಲ್ಲ. ಆದ್ರೆ ಈ ಮೂರು ಸಿನಿಮಾಗಳು ಸೂಪರ್ ಡೂಪರ್ ಹಿಟ್  ಆದ್ವು. ಕೊನೆಗೂ ಪೂರಿ ಮತ್ತು ಪವನ್ ‘ಕ್ಯಾಮರಾಮನ್ ಗಂಗಾ ತೋ ರಾಂಬಾಬು’ ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ರು.

Comments are closed.

Social Media Auto Publish Powered By : XYZScripts.com