ಬ್ಲೂವೇಲ್‌ಗಾಗಿ ಮೈಸೂರಿನಲ್ಲಿ ಹೆಚ್ಚು ಹುಡುಕಾಟ : ಅರಿವು ಮೂಡಿಸಲು ಶಿಕ್ಷಣ ಇಲಾಖೆಗೆ ಸುತ್ತೋಲೆ

ಮೈಸೂರು : ಬ್ಲೂವೇಲ್ ಸೂಸೈಡ್ ಗೇಮ್ಗಾಗಿ ಇಂಟರ್ನೆಟ್ನಲ್ಲಿ ಹಚ್ಚು ಹುಡುಕಾಟ ನಡೆಸಿರುವ ಪ್ರದೇಶ ಮೈಸೂರು ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ನಿಗಾ ವಹಿಸಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಿ. ರಂದೀಪ್ ಹೇಳಿದ್ದಾರೆ.
ಬ್ಲೂವೇಲ್ ಗೇಮ್ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈಗಾಗಲೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಈ ಮೂಲಕ ಜಿಲ್ಲೆಯಾದ್ಯಂತ ಇರುವ ಶಾಲೆಗಳಲ್ಲಿ ಪ್ರತಿನಿತ್ಯ ಅರಿವು ಮೂಡಿಸುವಂತೆ ಸೂಚಿಸಲಾಗಿದೆ. ಈ ಸಂಬಂಧ ಸೈಬರ್ ಕ್ರೈಮ್ ಇಲಾಖೆಯ ನೆರವು ಕೋರಲಾಗುವುದು ಎಂದು ರಂದೀಪ್ ಹೇಳಿದ್ದಾರೆ.
ಅವಶ್ಯಕತೆ ಇದ್ದಲ್ಲಿ ಮಕ್ಕಳಿಗೆ ಕೌನ್ಸಿಲಿಂಗ್ ಸಹ ಮಾಡಿಸುತ್ತೇವೆ. ಸೈಬರ್‌ ಕ್ರೈಂ ಜೊತೆಯಲ್ಲಿ ಗೇಮ್‌ ಲಿಂಕ್‌ ಪತ್ತೆ ಹಚ್ಚುವ ಕುರಿತು ಕ್ರಮ ವಹಿಸಲಾಗಿದೆ. ಮೈಸೂರಿನಲ್ಲಿ ಗೇಮ್‌ಗಾಗಿ ಹೆಚ್ಚು ಹುಡುಕಾಟ ಆಗಿರುವುದರಿಂದ ಹೆಚ್ಚಿನ ಗಮನವಹಿಸಲಾಗಿದೆ. ಯಾವುದೇ ಕಾರಣಕ್ಕೂ ಯಾರೊಬ್ಬರು ಬ್ಲೂವೇಲ್‌ ಗೇಮ್‌ಗೆ ಮೈಸೂರಿನಲ್ಲಿ ಬಲಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ರಂದೀಪ್ ಹೇಳಿದ್ದಾರೆ.

5 thoughts on “ಬ್ಲೂವೇಲ್‌ಗಾಗಿ ಮೈಸೂರಿನಲ್ಲಿ ಹೆಚ್ಚು ಹುಡುಕಾಟ : ಅರಿವು ಮೂಡಿಸಲು ಶಿಕ್ಷಣ ಇಲಾಖೆಗೆ ಸುತ್ತೋಲೆ

 • October 16, 2017 at 4:55 PM
  Permalink

  As I web-site possessor I believe the content matter here is rattling great , appreciate it for your efforts. You should keep it up forever! Good Luck.

 • October 24, 2017 at 12:44 PM
  Permalink

  Hello there, You have done an excellent job. I’ll certainly digg it and personally suggest to my friends. I am confident they’ll be benefited from this web site.

 • October 24, 2017 at 1:16 PM
  Permalink

  Some really great blog posts on this website , regards for contribution.

 • October 24, 2017 at 1:41 PM
  Permalink

  I’m not sure where you’re getting your information, but good topic. I needs to spend some time learning much more or understanding more. Thanks for great info I was looking for this information for my mission.

Comments are closed.