ವಿಜಯಪುರ : ಭಾರೀ ಮಳೆಯಿಂದ ಮನೆ ಕುಸಿದು ಐವರ ದುರ್ಮರಣ..

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಹಳಗುಣಕಿ ಹಾಗೂ ಜೇವೂರ ಗ್ರಾಮದಲ್ಲಿ ಮಳೆಯಿಂದ ಮನೆ ಕುಸಿದು ನಾಲ್ವರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ. ಹಳಗುಣಕಿ ಗ್ರಾಮದಲ್ಲಿ ರಾಚಪ್ಪ ಗಣಪತಿ ಬಡಿಗೇರ (60) ಹಾಗೂ ಈತನ ಪತ್ನಿ ಸಿದ್ಧವ್ವ (55) ಸಾವನ್ನಪ್ಪಿದರೆˌ ಜೇವೂರ ಗ್ರಾಮದಲ್ಲಿ ಕರಿಬಸಪ್ಪ ಈರಪ್ಪ ಆಕಳವಾಡಿ (65) ಹಾಗೂ ಈತನ ಪತ್ನಿ ಇಂದ್ರಾಬಾಯಿ (60) ಮತ್ತು ಒಂದು ನಾಯಿ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ.

 

ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ.ಬಿ. ಶಾಮಕುಮಾರˌ ಇಂಡಿ ತಹಶೀಲ್ದಾರ ಸುರೇಶ ಮ್ಶಾಗೇರಿˌ ಎಸಿ ಮಹಾದೇವ ಮುರಗಿ ಹಾಗೂ ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಭೇಟಿ ನೀಡಿದ್ದಾರೆ. ಈ ಕುರಿತು ಹೋರ್ತಿ ಹಾಗೂ ಝಳಕಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.

Comments are closed.