ಗೌರಿ ಹತ್ಯೆ ಬಗ್ಗೆ ಮೋದಿ ಮೌನಿಯಾಗಿದ್ದಾರೆಂದರೆ ನಾವೂ ಮೌನಿಯಾಗಿರಬೇಕು : ಸಲ್ಮಾನ್‌ ಖುರ್ಷಿದ್‌

ಧಾರವಾಡ : ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಕುರಿತಂತೆ ಕೇಂದ್ರದ ಮಾಜಿ ಸಚಿವ ಸಲ್ಮಾನ್‌ ಖುರ್ಷಿದ್ ಹೇಳಿಕೆ ನೀಡಿದ್ದಾರೆ. ಗೌರಿ ಲಂಕೇಶ್ ಹತ್ಯೆ ಖಂಡನಾರ್ಹ. ಒಬ್ಬರ ನಂತರ ಒಬ್ಬರಂತೆ ವಿಚಾರವಾದಿಗಳ ಹತ್ಯೆಯಾಗುತ್ತಿದೆ.

ಇದನ್ನು ನೋಡಿದರೆ ದೇಶದಲ್ಲಿ ಕೆಟ್ಟ ವಾತಾವರಣ ಸೃಷ್ಠಿಯಾಗಿದೆ ಎನಿಸುತ್ತಿದೆ. ಈ ಕೆಟ್ಟ ವಾತಾವರಣದ ವಿರುದ್ದ ದೇಶ ಒಂದಾಗಿ ಹೋರಾಡಬೇಕಿದೆ. ಗೌರಿ ಲಂಕೇಸ್‌ ಹತ್ಯೆ ಬಗ್ಗೆ ಪ್ರಧಾನಿ ಮೌನ ವಹಿಸಿದ್ದಾರೆಂದರೆ ನಾವು ಸಹ ಮೌನ ವಹಿಸಬೇಕಾಗುತ್ತದೆ.  ಒಬ್ಬರ ಮೇಲೆ ಒಬ್ಬರು ಬೆರಳು ಮಾಡಿ ಮಾತನಾಡುವುದನ್ನು ನಿಲ್ಲಿಸಬೇಕು. ಇಂತಹ ಹತ್ಯೆಗಳು ನಡೆದಾಗ ಆ ಸರ್ಕಾರ ಈ ಸರ್ಕಾರ ಎಂದು ನೋಡದೆ ಎಲ್ಲರೂ ಒಂದಾಗಿ ಇಂತಹ ಕೃತ್ಯಗಳನ್ನು ಹತ್ತಿಕ್ಕಬೇಕು ಎಂದಿದ್ದಾರೆ. ಜೊತೆಗೆ ಒಬ್ಬರ ಹತ್ಯೆ ನಡೆದಾಗ ಅದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕೇ  ಹೊರತು ಪರ-ವಿರೋಧ, ಆರೋಪ-ಟೀಕೆಗಳನ್ನು ಮಾಡುವುದು ಸರಿಯಲ್ಲ ಎಂದಿದ್ದಾರೆ.

 

4 thoughts on “ಗೌರಿ ಹತ್ಯೆ ಬಗ್ಗೆ ಮೋದಿ ಮೌನಿಯಾಗಿದ್ದಾರೆಂದರೆ ನಾವೂ ಮೌನಿಯಾಗಿರಬೇಕು : ಸಲ್ಮಾನ್‌ ಖುರ್ಷಿದ್‌

  • October 16, 2017 at 4:42 PM
    Permalink

    I enjoy you because of all your valuable labor on this web site. Kate really loves going through research and it’s easy to see why. Most people notice all concerning the powerful way you render great techniques through this blog and in addition improve participation from other individuals on that concept while my princess is becoming educated a lot. Take pleasure in the rest of the new year. You’re performing a good job.

Comments are closed.