ಗೌರಿ ಆಯ್ತು, ಈಗ ನಿಮ್ಮ ಸರದಿ : ಫೇಸ್‌ಬುಕ್‌ನಲ್ಲಿ ಪತ್ರಕರ್ತೆ ಸೇರಿ ಐವರಿಗೆ ಜೀವ ಬೆದರಿಕೆ

ದೆಹಲಿ : ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಬೆನ್ನಲ್ಲೇ ಈಗ ಮತ್ತೊಬ್ಬ ಪತ್ರಕರ್ತೆ ಸಾಗರಿಕ ಘೋಷ್ ಸೇರಿದಂತೆ ಐವರಿಗೆ ಬೆದರಿಕೆ ಹಾಕಲಾಗಿದ್ದು, ಈ ಸಂಬಂಧ ದೆಹಲಿ ಸೈಬರ್‌ ಕ್ರೈಂ ಪೊಲೀಸರು ಎಫ್ಐಆರ್‌ ದಾಖಲಿಸಿಕೊಂಡಿದ್ದಾರೆ.

ಶೋಭಾ ಡೇ, ಸಾಗರಿಕಾ ಘೋಷ್, ಅರುಂಧತಿ ರಾಯ್‌, ಕವಿತಾ ಕೃಷ್ಣನ್‌ ಹಾಗೂ ಶೀಲಾ ರಷೀದ್‌  ದೇಶದ್ರೋಹಿಗಳಾಗಿದ್ದು, ಪತ್ರಕರ್ತರ ಮುಖವಾಡ ಹಾಕಿಕೊಂಡು ಕೆಟ್ಟ ಕೆಲಸ ಮಾಡುತ್ತಿದ್ದಾರೆ . ಇಂತಹವರನ್ನು ಕೊಲ್ಲುತ್ತೇನೆ ಎಂದು ವಿಕ್ರಮಾದಿತ್ಯ ರಾಣಾ ಎಂಬ ಹೆಸರಿನ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದಾನೆ. ಕೂಡಲೇ ಸಾಗರಿಕಾ ಘೋಷ್ ಫೇಸ್‌ಬುಕ್‌ನ ಫೋಟೋ ತೆಗೆದು ಟ್ವೀಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ವಿಕ್ರಮಾದಿತ್ಯ ರಾಣಾ ಎಂಬ ವ್ಯಕ್ತಿಯ ಮೇಲೆ ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.
ಐಟಿ ಆ್ಯಕ್ಟ್ ಅನ್ವಯ ಎಫ್‌ಐಆರ್‌ ದಾಖಲಿಸಿಕೊಂಡಿದ್ದೇವೆ. ವಿಕ್ರಮಾದಿತ್ಯ ರಾಣಾ ಎಂಬುವವನು ಎರಡು ಅಕೌಂಟ್‌ ಹೊಂದಿದ್ದು, ವಿಕ್ರಮ್‌ ಜೆಬಿ ಎಂಬ ಅಕೌಂಟನ್ನು ನಿರ್ವಹಿಸುತ್ತಿದ್ದಾನೆ. ಈತ ಶಿಲ್ಲಾಂಗ್‌ನವನಾಗಿರುವುದಾಗಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

Comments are closed.