ಬಾಗಲಕೋಟೆ : ಬಸ್ – ಕ್ರೂಸರ್ ಭೀಕರ ಅಪಘಾತ , 6 ಜನರ ದುರ್ಮರಣ

ಬಾಗಲಕೋಟೆ : ರಸ್ತೆ ಸಾರಿಗೆ ಬಸ್ ಹಾಗೂ ಕ್ರೂಸರ್ ವಾಹನ ಢಿಕ್ಕಿಯಾಗಿ ಆರು ಜನರ ಸಾವನ್ನಪ್ಪಿದ್ದು, ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾಡಗಂಡಿ ಸಮೀಪದ ಹಳೇ ಕೊರ್ತಿ ಕೋಲಾರ ಸೇತುವೆ ಬಳಿ ಘಟನೆ ನಡೆದಿದೆ. ವಿಜಯಪುರ ದಿಂದ ಹುಬ್ಬಳ್ಳಿ ಗೆ ಹೋಗುತ್ತಿದ್ದ ರಸ್ತೆ ಸಾರಿಗೆ ವಾಹನ. ಶಿವಮೊಗ್ಗ ದಿಂದ ಸೊಲ್ಲಾಪುರ ಹೋಗುತ್ತಿದ್ದ ಕ್ರೂಸರ್ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಕ್ರೂಸರ್ ವಾಹನದವರು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಮಾಡ ತಾಲೂಕಿನ ದಾರಪಾಳ ಗ್ರಾಮದವರು. ಚಾಲಕ ನಾಗೇಶ, ವಿಜಯಾ ಶಿಂದೆ, ಪಾಂಡುರಂಗ ಸೂಂಳಕೆ ಎಂಬುವವರು ಮೃತಪಟ್ಟವರು. ಇಬ್ಬರು ಮಹಿಳೆಯರು ಇದ್ದು ಹೆಚ್ಚಿನ ಮಾಹಿತಿ ನೀರೀಕ್ಷೆ ಮಾಡಲಾಗಿದೆ. ಮೃತರ ಶಿವಮೊಗ್ಗ ಗೆ ಕ್ಯಾನ್ಸರ್ ಔಷಧ ತೆಗೆದುಕೊಂಡು ಬರುವಾಗ ಈ ಘಟನೆ ಜರುಗಿದೆ. ಬೀಳಗಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟ್ಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Social Media Auto Publish Powered By : XYZScripts.com