ಧಾರವಾಡ : ATM ನಲ್ಲಿ ಯುವತಿಯಿಂದ ಹಣ ಕಸಿಯಲು ಯತ್ನ : ವ್ಯಕ್ತಿ ಬಂಧನ

 

ಧಾರವಾಡ : ಹಣ ವಿತ್ ಡ್ರಾ ಮಾಡಲೆಂದು ಎಟಿಎಂ ಒಳಗೆ ಹೋದ ಮಹಿಳೆಯೊಬ್ಬರನ್ನು ಹಿಂಬಾಲಿಸಿದ ಯುವಕ ಎಟಿಎಂನಲ್ಲಿ ಮಹಿಳೆ ವಿತಡ್ರಾ ಮಾಡಿದ ಹಣವನ್ನು ಕಸಿದುಕೊಳ್ಳಲು ಯತ್ನಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಧಾರವಾಡ ನಗರದ ವಿದ್ಯಾಗಿರಿ ಬಡಾವಣೆಯಲ್ಲಿರುವ ಜೆಎಸ್ಎಸ್ ಕಾಲೇಜು ಬಳಿ ಇರುವ ಸಿಂಡಿಕೇಟ್ ಬ್ಯಾಂಕ್ ನ ಎಟಿಎಂನಲ್ಲಿ ಈ ಘಟನೆ ನಡೆದಿದೆ. ಜೆಎಸ್ಎಸ್ ಕಾಲೇಜಿನ ಉಪನ್ಯಾಸಕಿ ಸೌಮ್ಯ ಅವರು ಹಣ ವಿತಡ್ರಾ ಮಾಡಲೆಂದು ಸಿಂಡಿಕೇಟ್ ಬ್ಯಾಂಕ್ ನ ಎಟಿಎಂಗೆ ಹೋಗಿದ್ದಾರೆ.

ಆಗ ಅವರನ್ನೇ ಹಿಂಬಾಲಿಸಿದ ತೇಜಸ್ವಿನಗರದ ಶಿವಾಜಿ ಎಂಬ ಯುವಕ ಎಟಿಎಂ ಕೊಠಡಿಯೊಳಗೆ ನುಗ್ಗಿ ಸೌಮ್ಯ ಅವರ ಬಾಯಿ ಮುಚ್ಚಿ ಹಣವನ್ನು ಕಸಿದುಕೊಂಡು ಹೋಗಲು ಯತ್ನಿಸಿದ್ದಾನೆ. ಆದರೆ, ಸೌಮ್ಯ ಅವರು ಕಿರುಚಾಡುತ್ತಿದ್ದಂತೆ ಅಲ್ಲೇ ಇದ್ದ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿ ಸೌಮ್ಯ ಅವರನ್ನು ರಕ್ಷಣೆ ಮಾಡಿದ್ದಾರೆ. ನಂತರ ಆ ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇದೀಗ ವಿದ್ಯಾಗಿರಿ ಠಾಣೆ ಪೊಲೀಸರು ಶಿವಾಜಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Social Media Auto Publish Powered By : XYZScripts.com