ಅಕ್ಕನ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ದಾರಿ ತಪ್ಪಿದ ಸಹೋದರ…

ಯೋಗೀಶ್ ಮಾಸ್ಟರ್‌

ಹೋರಾಟಗಾರರ ಮೇಲೆ ದಾಳಿಯಾದಾಗ ಅವರು ಯಾವುದರ ವಿರುದ್ಧವಾಗಿರುವುದೋ ಅವುಗಳ ಕಡೆಯಿಂದ ದಾಳಿಯಾಗಿದೆ ಎಂಬುದು ಒಂದು ಪ್ರಾಥಮಿಕ ಗ್ರಹಿಕೆ. ಅದು ಅನುಭವಿತರಿಗೆ ನೇರ ಸತ್ಯವಾಗಿದ್ದರೂ ತನಿಖೆ ಮತ್ತು ತಪಾಸಣೆ ಮಾಡುವವರಿಗೆ ಅದು ಸಂತ್ರಸ್ತರ ಅನುಮಾನ. ನಿಜವೋ ಸುಳ್ಳೋ ಅದು ಮುಂದಿನ ಅವರ ವಿಚಾರಣೆಯ ಫಲಿತ. ಆದರೆ ತನಿಖೆಯು ಯಶಸ್ವಿಯಾಗಿ ತನ್ನ ಫಲಿತವನ್ನು ನೀಡುವವರೆಗೂ ಆ ಅನುಮಾನ ಸಂತ್ರಸ್ತರ ಪಾಲಿಗೆ ನಿಜವೇ ಆಗಿರುತ್ತದೆ.

ಗೌರಿ ಲಂಕೇಶ್ ಸಾವಿಗೆ ಬಲಪಂಥೀಯ ಧೋರಣೆಗಳ ಕಾರಣಗಳನ್ನು ಗ್ರಹಿಸುವುದೂ ಇದೇ ಮಾದರಿಯಲ್ಲಿಯೇ. ಅದನ್ನು ರಾಹುಲ್ ಗಾಂಧಿ ಮಾತ್ರವಲ್ಲ ನನ್ನಂತಹ ಅಸಂಖ್ಯರೂ ಕೂಡ ನೇರವಾಗಿ ಗ್ರಹಿಸುವುದು ಹಾಗೆಯೇ. ಅದನ್ನು ಸುಳ್ಳೆಂದು ಸಾಬೀತುಗೊಳಿಸಲಿ ನೋಡೋಣ. ಆದರೆ ಈ ಗ್ರಹಿಕೆಯ ಕಾರಣಗಳಿಗೆ ಪರಂಪರೆಯಿದೆ. ಸಾವಿರಾರು ವರ್ಷಗಳ ಇತಿಹಾಸದಲ್ಲಿ ಅಸಂಖ್ಯಾತ ಸಾಮ್ಯತೆಯ ಉದಾಹರಣೆಗಳಿವೆ.

ರಾಹುಲ್ ಗಾಂಧಿಯ ಮಾತುಗಳನ್ನು ಹಾಗೆ ಖಂಡಿಸುವ ಇಂದ್ರಜಿತ್ ಗೆ ತಾನು ಕೊಲೆಯ ಆಪಾದನೆಯನ್ನು ನಕ್ಸಲರ ತಲೆಗೆ ಕಟ್ಟಲಾಗದು ಎಂಬ ಸಾಮಾನ್ಯ ಅರಿವು ಇಲ್ಲದಿರುವುದು ಅವನ ಪ್ರಜ್ಞೆಗೇಡಿತನವನ್ನು ತೋರಿಸುತ್ತದೆ. ಒಂದು ವೇಳೆ ಅವನ ಅನುಮಾನವನ್ನು ವ್ಯಕ್ತಪಡಿಸಿದ್ದೇ ಆಗಿದ್ದರೆ ನಮ್ಮ ಅನುಮಾನವನ್ನು ವ್ಯಕ್ತಪಡಿಸಬಾರದು ಎಂದು ಹೇಳುವ ಯಾವ ನೈತಿಕ ಅಥವಾ ತಾರ್ಕಿಕ ಹಕ್ಕೂ ಇಲ್ಲ.

ತನ್ನಕ್ಕನ ಸಾವಿನಲ್ಲಿಯೂ ತನ್ನ ರಾಜಕೀಯದ ಬೇಳೆ ಬೇಯಿಸಿಕೊಳ್ಳುವವನ ಸೋದರ ಪ್ರೀತಿಯ ಬಗ್ಗೆ ಮಾತಾಡುವ ಹಕ್ಕು ನನಗೆ ಇಲ್ಲ ಎಂದೇ ಭಾವಿಸುತ್ತಾ “ಪ್ರೀತಿ, ಒಲವು, ನಿಲುವು, ಪ್ರತಿಭೆ ಮತ್ತು ಪ್ರಜ್ಞೆಗಳೆಲ್ಲವೂ ರಕ್ತದಲ್ಲಿ ಬರುವುದಿಲ್ಲ” ಎಂಬುದನ್ನು ನಿರೂಪಿಸಿದ ಇಂದ್ರಜಿತ್ ಅದಕ್ಕೆ ಒಂದು ಸಮರ್ಪಕ ಉದಾಹರಣೆ.

ಅಧಿಕಾರದಲ್ಲಿರುವ ಕಾಂಗ್ರೆಸ್ಸನ್ನು ಬಿಕ್ಕಟ್ಟಿಗೆ ಸಿಕ್ಕಿಸಲು ಮತ್ತು ತಮ್ಮ ಸೈದ್ಧಾಂತಿಕ ನಿಲುವನ್ನು ವಿರೋಧಿಸುವವರಿಗೆ ಪಾಠ ಕಲಿಸಲು ಹೈ ಪ್ರೊಫೈಲ್ ನ ಗೌರಿ ಲಂಕೇಶ್ ಕೊಲೆಯ ಉದ್ದೇಶ ಒಂದೇ ಕಲ್ಲಿಗೆ ಎರಡು ಹಕ್ಕಿಯೇನೋ ಎಂಬ ಅನುಮಾನ ಬರಬಾರದು ಎಂದರೆ ಹೇಗೆ. ಪ್ರಾಮಾಣಿಕವಾಗಿ ತನಿಖೆಗೆ ಸಹಕರಿಸಿ ಅನುಮಾನವನ್ನು ಸುಳ್ಳು ಮಾಡಲಿ.

ನಕ್ಸಲರ ಬಗ್ಗೆ ಹೇಳುವುದಾದರೆ ಮೊದಲಿಗೆ ಅದೊಂದು ಚಳವಳಿ. ಶೋಷಿತರಿಗೆ ನ್ಯಾಯವೊದಗಿಸುವ ನಿಟ್ಟಿನಲ್ಲಿಯೇ ಅದು ಪ್ರಾರಂಭವಾಗಿದ್ದು ಎಂಬುದು ಅದರ ಇತಿಹಾಸ ಸ್ಪಷ್ಟಪಡಿಸುತ್ತದೆ. ಹಾಗೆಯೇ ಅದರ ಗುರಿ ಸಾಧನೆಯ ಮಾರ್ಗದ ಬಗ್ಗೆ ಪರ ವಿರೋಧಗಳ ಚರ್ಚೆ ಕೂಡ ಮುಗಿದ ಭಾಗ. ಇನ್ನು ಗೌರಿ ನಕ್ಸಲರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ್ದರಲ್ಲಿ ಪ್ರಮುಖ ಪಾತ್ರವಹಿಸಿದ್ದು ಎಲ್ಲರಿಗೆ ಗೊತ್ತಿದೆ. ಈ ಯೋಜನೆಯ ಭಾಗವಾದ ನೂರ್ ಶ್ರೀಧರ್ ಮತ್ತು ಸಿರಿಮನೆ ನಾಗರಾಜ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಕೆಲವು ನಕ್ಸಲರು ಅದನ್ನು ಕೆಲವು ಹಿತೈಷಿಗಳ ಬಗ್ಗೆ ತೋಡಿಕೊಂಡಿದ್ದೂ ಇದೆ. ಆ ಅಸಮಾಧಾನವೂ ಅವರ ಬಗ್ಗೆ ಜಿಗುಪ್ಸೆಯ ನಿಟ್ಟುಸುರಾಗಿತ್ತೇ ಹೊರತು ಪ್ರತಿಕಾರದ ಯಾವ ಆಲೋಚನೆಯೂ ಇರಲಿಲ್ಲ. ಜೊತೆಗೆ ಅವರಾರೂ ಗೌರಿ ಲಂಕೇಶ್ ಬಗ್ಗೆ ಯಾವ ಅಸಮಾಧಾನವನ್ನೂ ಇಟ್ಟುಕೊಂಡಿರಲಿಲ್ಲ. ಇದು ನನ್ನ ನೇರ ಸಾಕ್ಷಿ.

ತನ್ನದೊಂದು ದಂತಗೋಪುರದಲ್ಲಿದ್ದುಕೊಂಡು ಅದನ್ನು ಭದ್ರಪಡಿಸಿಕೊಳ್ಳುತ್ತಾ, ಅದನ್ನು ನಾನಾ ರೀತಿಗಳಿಂದ ತಿಕ್ಕಿ ಹೊಳಪನ್ನು ಮಾಸದಂತೆ ನೋಡಿಕೊಳ್ಳುವ ಇಂದ್ರಜಿತ್ ಗೆ ಇವುಗಳೆಲ್ಲಾ ಗೊತ್ತಾಗುವುದಿಲ್ಲ. ಏಕೆಂದರೆ ಶೋಷಿತರ, ದಮನಿತರ, ನೊಂದವರ ಜೊತೆಗೆ ಹೆಜ್ಜೆ ಹಾಕಿ ಅವರ ಹೆಗಲಿಗೆ ಹೆಗಲು ಕೊಡುವ ಕೆಲಸವನ್ನು ಮಾಡಿಲ್ಲವಲ್ಲ. ಆದರೆ ಇಂದ್ರಜಿತ್ ಬಗ್ಗೆ ಹೇಳುವುದಾದರೆ ದಾರಿ ತಪ್ಪಿದ ಮಗನಿಗೆ ಗುರಿಯೂ ತಪ್ಪುವುದು.

3 thoughts on “ಅಕ್ಕನ ಸಾವಿನಲ್ಲೂ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ದಾರಿ ತಪ್ಪಿದ ಸಹೋದರ…

 • October 18, 2017 at 12:31 PM
  Permalink

  Hi! I could have sworn I’ve been to this blog before but after checking through some of the post I realized it’s new to me. Anyways, I’m definitely delighted I found it and I’ll be bookmarking and checking back often!

 • October 24, 2017 at 7:40 PM
  Permalink

  I have learn a few excellent stuff here. Definitely value bookmarking for revisiting. I surprise how so much effort you place to create such a great informative web site.

 • October 24, 2017 at 8:33 PM
  Permalink

  Cool blog! Is your theme custom made or did you download it from somewhere? A theme like yours with a few simple adjustements would really make my blog stand out. Please let me know where you got your design. Cheers

Comments are closed.

Social Media Auto Publish Powered By : XYZScripts.com