ಬಿಕಿನಿ ಹಾಕಿಕೊಳ್ಳೋದು ಅಷ್ಟು ಸುಲಭ ಅಲ್ಲ, ಅದಕ್ಕೋಸ್ಕರ ನಾವು ಪಡೋ ಪಾಡು ಅಷ್ಟಿಷ್ಟಲ್ಲ

ಇತ್ತೀಚೆಗೆ ಸೌತ್ ಸಿನಿಮಾಗಳಲ್ಲಿ ನಾಯಕಿಯರ ಹೊಕ್ಕಳ ಮೇಲೆ ಹೂ, ಹಣ್ಣು ಯಾಕೆ ಹಾಕ್ತಾರೊ..? ಅದರಿಂದ ಅದೇನು ಶೃಂಗಾರ ಉಕ್ಕುತ್ತೋ ಗೊತ್ತಿಲ್ಲ ಅಂತ ಹೇಳಿ ಸುದ್ದಿ ಮಾಡಿದ್ದು ಗೊತ್ತಿದೆ. ಇದೀಗ ನಾಯಕಿಯರು ಬಿಕಿನಿ ಹಾಕ್ಕೊಂಡ್ರೆ ಯಾಕೆ ವಿಚಿತ್ರವಾಗಿ ನೋಡ್ತಿರಾ..? ಅಂತ ಈಕೆ ಪ್ರಶ್ನೆ ಮಾಡ್ತಿದ್ದಾಳೆ.

 

 

ಹೌದು ಹೀಗಂತ ಡೈಲಾಗ್  ಬಿಟ್ಟಿರೋದು ಮತ್ಯಾರೂ ಅಲ್ಲ ತಪ್ಸೀ ಪನ್ನು. ಸದ್ಯ ವರುಣ್ ಧವನ್ ಅಭಿನಯದ ಜುಡ್ವಾ-2 ಸಿನಿಮಾದಲ್ಲಿ ತಪ್ಸೀ ನಾಯಕಿಯಾಗಿ ಅಭಿನಯಿಸಿದ್ದು, ಚಿತ್ರದ ಕೆಲ ದೃಶ್ಯಗಳಲ್ಲಿ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಸೆಕ್ಸಿಯಾಗಿ ದರ್ಶನ ಕೊಟ್ಟಿದ್ದಾಳೆ. ಡೇವಿಡ್ ಧವನ್ ನಿರ್ದೇಶನದ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಮತ್ತೊಬ್ಬ ನಾಯಕಿಯಾಗಿ ಮಿಂಚಿದ್ದಾಳೆ. ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಇಬ್ಬರು ನಾಯಕಿಯರು ಚಿತ್ರದಲ್ಲಿ ಸಿಕ್ಕಾಪಟ್ಟೆ ಬೋಲ್ಡಾಗಿ ನಟಿಸಿರುವಂತೆ ಕಾಣ್ತಿದೆ.

 

ಜುಡ್ವಾ-2 ಚಿತ್ರದಲ್ಲಿ ತಪ್ಸೀ ಪನ್ನು ಬಿಕಿನಿಯಲ್ಲಿ ಕಾಣಿಸಿಕೊಂಡಿರೋದ್ರ ಬಗ್ಗೆ ಪ್ರಶ್ನಿಸಿದ್ದಾಗ ಆಕೆ ಗರಂ ಆಗಿದ್ದಾಳೆ. ಅರೆ ನಾಯಕಿಯರು ಬಿಕಿನಿ ಹಾಕಿಕೊಂಡ್ರೆ ಯಾಕೆ ವಿಚಿತ್ರವಾಗಿ‌ ನೋಡ್ತೀರಾ.? ಚಿತ್ರದ ಪಾತ್ರಕ್ಕಾಗಿ ಆ ರೀತಿ ಕಾಣಿಸಿಕೊಂಡಿದ್ದೀನಿ ಅಷ್ಟೇ. ಅಷ್ಟಕ್ಕೂ ಬಿಕಿನಿಯಲ್ಲಿ ಚೆಂದವಾಗಿ ಕಾಣಿಸೋದು ಅಷ್ಟು ಸುಲಭ ಅಲ್ಲ. ಬಿಕಿನಿಗೆ ಒಪ್ಪುವಂತೆ ದೇಹದ ಆಕಾರವನ್ನ ಕಾಪಾಡಿಕೊಳ್ಳಬೇಕು. ನಾಮ್ ಶಬಾನಾ ಚಿತ್ರಕ್ಕಾಗಿ ನಾನು ಸಿಕ್ಕಾಪಟ್ಟೆ ಸಣ್ಣ ಆಗಿದ್ದೆ. ಜುಡ್ವಾ-2 ಚಿತ್ರದಲ್ಲಿ ಬಿಕಿನಿ ಹಾಕಿಕೊಳ್ಳೊಕ್ಕೋಸ್ಕರ ಸ್ವಲ್ಪ ತೂಕ ಹೆಚ್ಚಿಸಿಕೊಂಡು ಬಿಕಿನಿಗೆ ಒಪ್ಪುವಂತೆ ದೇಹವನ್ನ ತಿದ್ದಿ ತೀಡಿದ್ದೇನೆ. ಅದಕ್ಕಾಗಿ ನಾನು ಪಟ್ಟಿರೋ ಕಷ್ಟ ಅಷ್ಟಿಷ್ಟಲ್ಲ ಅಂತ ತಪ್ಸೀ ತಿಳಿಸಿದ್ದಾಳೆ.

ತೆಲುಗಿನಲ್ಲಿ ಬಂದು ಸಕ್ಸಸ್ ಕಂಡ ಹಲೋ ಬ್ರದರ್ ಸಿನಿಮಾ ರೀಮೇಕ್ ಜುದ್ವಾ-2. ಇದೇ ಚಿತ್ರದ ಕನ್ನಡ ಅವತರಣಿಕೆಯಾದ ಚೆಲುವ ಚಿತ್ರದಲ್ಲಿ ರವಿಚಂದ್ರನ್ ನಟಿಸಿದ್ರು. ಜುದ್ವಾ -2 ಚಿತ್ರದಲ್ಲಿ ವರುಣ್ ಧವನ್ ದ್ವಿಪಾತ್ರದಲ್ಲಿ ಕಮಾಲ್ ಮಾಡೋಕೆ ಬರ್ತಿದ್ದು, ಶೀಘ್ರದಲ್ಲೇ ಚಿತ್ರ ತೆರೆಗೆ ಬರಲಿದೆ.

4 thoughts on “ಬಿಕಿನಿ ಹಾಕಿಕೊಳ್ಳೋದು ಅಷ್ಟು ಸುಲಭ ಅಲ್ಲ, ಅದಕ್ಕೋಸ್ಕರ ನಾವು ಪಡೋ ಪಾಡು ಅಷ್ಟಿಷ್ಟಲ್ಲ

 • October 16, 2017 at 4:44 PM
  Permalink

  It is in point of fact a great and helpful piece of information. I’m glad that you just shared this useful info with us. Please stay us up to date like this. Thank you for sharing.

 • October 16, 2017 at 5:03 PM
  Permalink

  I am really impressed with your writing skills and also with the layout on your blog. Is this a paid theme or did you customize it yourself? Anyway keep up the excellent quality writing, it is rare to see a nice blog like this one nowadays..

 • October 18, 2017 at 11:55 AM
  Permalink

  Wow, fantastic blog layout! How long have you been blogging for? you make blogging look easy. The overall look of your web site is fantastic, let alone the content!

Comments are closed.