ಹಿಂಸಾಚಾರ ನಡೆಸಲು ಅನುಯಾಯಿಗಳಿಗೆ 5 ಕೋಟಿ ನೀಡಿದ್ದ ಡೇರಾ ಸಚ್ಚಾ ಸೌದ

ಪಂಚಕುಲಂ : ಅತ್ಯಾಚಾರ ಆರೋಪದಡಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಗುರ್ಮಿತ್‌ ರಾಂ ರಹೀಮ್‌ ಸಿಂಗ್‌, ತನ್ನ ಬಂಧನದ ದಿನ ಗಲಭೆ ಎಬ್ಬಿಸಲು ಭಕ್ತರು ಹಾಗೂ ದುಷ್ಕರ್ಮಿಗಳಿಗೆ 5 ಕೋಟಿ ಹಣ ನೀಡಿದ್ದ ವಿಷಯ ಬಹಿರಂಗಗೊಂಡಿದೆ.

ಗಲಭೆ ಕುರಿತಂತೆ ವಿಶೇಷ ತನಿಖಾ ತಂಡ ತನಿಖೆ ನಡೆಸುತ್ತಿದ್ದು, ಡೇರಾ ಆಶ್ರಮದ ಬೆಂಬಲಿಗರಿಗೆ ಹಣ ನೀಡಿ ತೀರ್ಪು ಪ್ರಕಟವಾಗುವ ಮುನ್ನವೇ ಗಲಭೆ ಎಬ್ಬಿಸುವಂತೆಸೂಚಿಸಲಾಗಿತ್ತು. ಈ ಗಲಭೆಗೆ ಡೇರಾ ಆಶ್ರಮದ ಪಂಚಕುಲಂ ಬ್ರಾಂಚ್‌ನ ಮುಖ್ಯಸ್ಥ ಚಮ್ಕೌರ್‌ ಸಿಂಗ್‌ ಬೆಂಬಲಿಗರಿಗೆ ಹಣ ಸಪ್ಲೆ ಮಾಡಿದ್ದ ಎಂದು ಎಸ್‌ಐಟಿ ವರದಿಯಲ್ಲಿ ತಿಳಿಸಲಾಗಿದೆ.

ಅಲ್ಲದೆ ಚಮ್ಕೌರ್‌ ಗಲಭೆ ನಡೆದ ದಿನದಿಂದ ತನ್ನ ಕುಟುಂಬಸ್ಥರ ಜೊತೆ ನಾಪತ್ತೆಯಾಗಿದ್ದಾನೆ. ಅಲ್ಲದೆ ಸಿರ್ಸಾದಲ್ಲಿರುವ ಡೇರಾ ಪ್ರಧಾನ ಕಚೇರಿಯಿಂದ ಗಲಭೆ ಎಬ್ಬಿಸಲು ಪಂಜಾಬ್‌ ಸೇರಿದಂತೆ ಹಲವೆಡೆ ಹಣ ವರ್ಗಾವಣೆ ಮಾಡಲಾಗಿತ್ತು. ಗಲಭೆಯಲ್ಲಿ ಪ್ರಾಣಹಾನಿ ಸಂಭವಿಸಿದರೆ ಪರಿಹಾರ ನೀಡುವುದಾಗಿ ಡೇರಾ ಆಶ್ರಮದ ಮುಖ್ಯಸ್ಥರು ಭರವಸೆ ನೀಡಿದ್ದರು ಎಂದು ಆಶ್ರಮದ ಅನುಯಾಯಿಗಳೊಬ್ಬರು ಹೇಳಿದ್ದಾರೆ. ಜೊತೆಗೆ ಗಲಭೆಯಲ್ಲಿ ತೋಟಗಾರಿಕಾ ವಿಜ್ಞಾನಿಯೊಬ್ಬನ ಕೈವಾಡವೂ ಇದ್ದು, ಆತನೂ ಹಣ ವರ್ಗಾವಣೆ ಮಾಡುತ್ತಿದ್ದುದಾಗಿ ತಿಳಿದುಬಂದಿದೆ.

 

One thought on “ಹಿಂಸಾಚಾರ ನಡೆಸಲು ಅನುಯಾಯಿಗಳಿಗೆ 5 ಕೋಟಿ ನೀಡಿದ್ದ ಡೇರಾ ಸಚ್ಚಾ ಸೌದ

  • October 20, 2017 at 9:26 PM
    Permalink

    Thanks , I’ve just been searching for info about this topic for a while and yours is the greatest I have found out so far. But, what about the conclusion? Are you sure about the supply?

Comments are closed.