ಉಗ್ರ ಸಂಘಟನೆಗಳು ನಮ್ಮಲ್ಲಿವೆ, ಅದರಲ್ಲಿ ಆಶ್ಚರ್ಯವೇನಿದೆ : ಸತ್ಯ ಬಾಯ್ಬಿಟ್ಟ ಪಾಕ್‌

ಇಸ್ಲಾಮಾಬಾದ್‌ : ಉಗ್ರರ ಸ್ವರ್ಗ ಸ್ಥಾನ ಪಾಕಿಸ್ತಾನ ಕೊನೆಗೂ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಲಷ್ಕರೆ ತೊಯ್ಬಾ, ಜೆಷೆ ಮೊಹಮ್ಮದ್‌ ಸೇರಿದಂತೆ ಹಲವು ಉಗ್ರ ಸಂಘಟನೆಗಳು ನಮ್ಮ  ನೆಲದಿಂದಲೇ ಕಾರ್ಯಾಚರಣೆ ನಡೆಸುತ್ತಿರುವುದಾಗಿ ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವ ಮಹಮ್ಮದ್‌ ಖ್ವಾಜಾ ಆಸೀಫ್‌ ಬಾಯ್ಬಿಟ್ಟಿದ್ದಾರೆ.

ಪಾಕಿಸ್ತಾನದ ಸುದ್ದಿವಾಹಿನಿಯೊಂದರಲ್ಲಿ ಮಾತನಾಡಿದ ಆಸೀಫ್‌, ಜೆಷೆ ಮೊಹಮ್ಮದ್‌, ಲಷ್ಕರೆ ತೊಯ್ಬಾದಂತಹ ನಿಷೇದಿತ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲೇ ಇವೆ. ಅದರಲ್ಲಿ ಆಶ್ಚರ್ಯಪಡುವಂತದ್ದೇನಿದೆ. ಅವುಗಳ ವಿರುದ್ದ ಮೂರು ವರ್ಷಗಳಿಂದ ನಾವು ಹೋರಾಡುತ್ತಲೇ ಇದ್ದೇವೆ. ಇಂತಹ ಉಗ್ರ ಸಂಘಟನೆಗಳನ್ನು ನಾವು ಮೊದಲು ನಿರ್ನಾಮ ಮಾಡಬೇಕು. ನಂತರ ಜಾಗತಿಕ ಸಮುದಾಯದ ಮುಂದೆ ನಿಂತು ಸ್ಪಷ್ಟನೆ ನೀಡಬಹುದು. ಭಯೋತ್ಪಾದನೆ ವಿಚಾರದಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳು ಪಾಕಿಸ್ತಾನದತ್ತ ಬೆಟ್ಟು ಮಾಡಿ ತೋರಿಸುತ್ತಿವೆ. ಜಾಗತಿಕ ಸಮುದಾಯದ ಮುಂದೆ ಪಾಕಿಸ್ತಾನ ತನ್ನ ಇಮೇಜನ್ನು ಬದಲಿಸಿಕೊಳ್ಳಬೇಕಿದೆ. ಅದಕ್ಕಾಗಿ ನಮ್ಮ ತಪ್ಪುಗಳನ್ನು ನಾವು ಒಪ್ಪಿಕೊಂಡು, ಬದಲಾವಣೆಯತ್ತ ಗಮನ ಹರಿಸಬೇಕಿದೆ ಎಂದಿದ್ದಾರೆ.

Social Media Auto Publish Powered By : XYZScripts.com