ಬಂದೂಕಿನಿಂದ ವ್ಯಕ್ತಿಯ ದನಿ ಅಡಗಿಸಿ ವಾದ ಗೆಲ್ಲುವುದು ಹೇಯ ಮಾರ್ಗ : ಕಮಲ್‌ ಹಾಸನ್

ಚೆನ್ನೈ : ಪತ್ರಕರ್ತೆ ಗೌರಿ ಲಂಕೇಶ್‌ ಕೊಲೆ ಪ್ರಕರಣ ಸಂಬಂಧ ದೇಶಾದ್ಯಂತ ವ್ಯಾಪಕ  ಟೀಕೆ, ಖಂಡನೆ ವ್ಯಕ್ತವಾಗುತ್ತಿದ್ದು, ಬಾಲಿವುಡ್‌ ಖ್ಯಾತನಾಮರೂ ಗೌರಿ ಹತ್ಯೆಯನ್ನು ವಿರೋಧಿಸಿದ್ದಾರೆ. ಇದೇ ವೇಳೆ ತಮಿಳಿನ ಸೂಪರ್‌ ಸ್ಟಾರ್‌ ನಟ ಕಮಲ್‌ ಹಾಸನ್‌ ಸಹ ದುಷ್ಕರ್ಮಿಗಳ ಕೃತ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಂದೂಕಿನ ಮೂಲಕ ಯಾವುದೇ ವ್ಯಕ್ತಿಯ ದನಿಯನ್ನು ಅಡಗಿಸಿ ಚರ್ಚೆಯಲ್ಲಿ ಗೆಲ್ಲುವುದು ಅತ್ಯಂತ ಹೇಯ ಮಾರ್ಗವಾಗಿದೆ. ಗೌರಿ ಲಂಕೇಶ್‌ ಅವರ ಸಾವು ನೋವು ತಂದಿದೆ. ಅವರ ಸಾವಿಗೆ ಸಂತಾಪ ಸೂಚಿಸುತ್ತೇನೆ ಎಂದು ಟ್ವೀಟ್‌  ಮಾಡಿದ್ದಾರೆ.

 

Comments are closed.

Social Media Auto Publish Powered By : XYZScripts.com