ನಟನ ಮನೆ ಸುತ್ತ ದುಷ್ಕರ್ಮಿಗಳ ಓಡಾಟ : ಪೊಲೀಸರ ರಕ್ಷಣೆ ಕೋರಿದ ಚೇತನ್

ಬೆಂಗಳೂರು /ಶಿರಸಿ : ಇತ್ತೀಚೆಗಷ್ಟೇ ಬಿಜೆಪಿ ನಾಯಕರ ವಿರುದ್ದ ವೀರಶೈವ ಸಮಾರಂಭವೊಂದರಲ್ಲಿ ಕಿಡಿ ಕಾರಿದ್ದ ನಟ ಚೇತನ್‌ಗೆ ಜೀವ ಭಯ ಕಾಡುತ್ತಿದೆ. ಮನೆಯ ಸುತ್ತ ದುಷ್ಕರ್ಮಿಗಳು ಓಡಾಡುತ್ತಿರುವುದಾಗಿ ಶೇಷಾದ್ರಿಪುರಂ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರ ರಕ್ಷಣೆ ಕೋರಿದ್ದಾರೆ.

ಮತ್ತೊಂದೆಡ ಶಿರಸಿಯಲ್ಲಿ ಹಿರಿಯ ಪತ್ರಕರ್ತ ಸಚ್ಚಿದಾನಂದ ಹೆಗಡೆ ಅವರಿಗೂ ಜೀವ ಬೆದರಿಕೆ ಕರೆ ಬಂದಿರುವುದಾಗಿ ಹೇಳಿದ್ದಾರೆ. ಕಳೆದ ಆರು ದಿನಗಳಿಂದ ದುಷ್ಕರ್ಮಿಗಳು ಕರೆ ಮಾಡುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿನೆ ಮಾಡುತ್ತಿದ್ದಾರೆ. ಕನ್ನಡ ಭಾಷೆಯಲ್ಲೇ ಬೆದರಿಕೆ ಒಡ್ಡುತ್ತಿರುವುದಾಗಿ ಹೇಳಿದ್ದಾರೆ. ಕಳೆದ ಫೆಬ್ರವರಿಯಲ್ಲೂ ಇದೇ ರೀತಿ ರಕೆ ಬಂದಿತ್ತು ಎಂದು ಮಾಹಿತಿ ನೀಡಿದ್ದಾರೆ.

 

 

Comments are closed.

Social Media Auto Publish Powered By : XYZScripts.com