ಗೌರಿ ಹತ್ಯೆ ಖಂಡಿಸಿ ರಾಷ್ಟ್ರವ್ಯಾಪಿ ಪ್ರತಿಭಟನೆ : ಪತ್ರಕರ್ತೆ ಪರ ನಿಂತ ವಿದೇಶಿ ಮಾಧ್ಯಮಗಳು

ಚೆನ್ನೈ : ಹಿರಿಯ ಪತ್ರಕರ್ತೆ ಗೌರಿ ಲಂಕೇಶ್‌ ಅವರ ಹತ್ಯೆಯನ್ನು ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಖಂಡಿಸಿವೆ. ಚೆನ್ನೈನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಬೆಂಗಳೂರಿನಲ್ಲಿ ನಡೆದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯನ್ನು ನಾವು ಖಂಡಿಸುತ್ತೇವೆ ಮತ್ತು ವಿಶ್ವದಾದ್ಯಂತ ಮಾಧ್ಯಮ ಸ್ವಾತಂತ್ರ್ಯ ಪ್ರತಿಪಾದಕರ ಜೊತೆ ಕೈಜೋಡಿಸುವುದಾಗಿ ಹೇಳಿದ್ದು, ಗೌರಿ ಲಂಕೇಶ್‌ ಸಾವಿಗೆ ಸಂತಾಪ ಸೂಚಿಸಿದೆ.

ಗೌರಿ ಹತ್ಯೆಗೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಗಿದ್ದು, ದೆಹಲಿಯಲ್ಲಿ ಪ್ರೆಸ್‌ ಕ್ಲಬ್‌ ಆಫ್‌ ಇಂಡಿಯಾ, ದ ಪ್ರೆಸ್‌ ಅಸೋಸಿಯೇಶನ್‌ ಹಾಗೂ ದ ಇಂಡಿಯನ್‌ ವುಮೆನ್‌ ಪ್ರೆಸ್‌ ಕಾ. ಘಟನೆಯನ್ನು ಖಂಡಿಸಿದ್ದು, ಇದೊಂದು ಹೇಡಿತನದ ಕೆಲಸ ಎಂದಿದೆ. ಜೊತೆಗೆ ಗೌರಿ ಸಾವಿಗೆ ನ್ಯಾಯ ಕೇಳಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ದೆಹಲಿಯ ಜಂತರ್‌ ಮಂತರ್‌, ಮುಂಬೈ, ಚೆನ್ನೈ, ಹೈದರಾಬಾದ್, ಬೆಂಗಳೂರು ಸೇರಿದಂತೆ ಹಲವು ರಾಜ್ಯಗಳಲ್ಲಿ ಗೌರಿ ಹತ್ಯೆ ಖಂಡಿಸಿ ಪ್ರತಿಭಟನೆ ನಡೆಸಲಾಗಿದೆ.

ಮತ್ತೊಂದೆಡೆ ವಿದೇಶಿ ಮಾಧ್ಯಮಗಳು ಗೌರಿ ಹತ್ಯೆಯನ್ನು ಖಂಡಿಸಿವೆ. ನ್ಯೂಯಾರ್ಕ್‌ ಟೈಮ್ಸ್‌, ಬಿಬಿಸಿ ನ್ಯೂಸ್‌, ದ ಗಾರ್ಡಿಯನ್‌, ವಾಷಿಂಗ್ಟನ್‌ ಪೋಸ್ಟ್‌ ಸೇರಿದಂತೆ ಹಲವು ಮಾಧ್ಯಮಗಳು ಗೌರಿ ಪರ ನಿಂತಿದ್ದು, ಅವರ ಸಾವಿಗೆ ಸಂತಾಪ ಸೂಚಿಸಿವೆ.

 

Comments are closed.

Social Media Auto Publish Powered By : XYZScripts.com