ಬೆತ್ತಲೆ ಪೋಸ್ ಕೊಟ್ಟು ಸಂದೇಶ ಸಾರಿದ ಪ್ರೆಗ್ನೆಂಟ್ ಹೀರೋಯಿನ್ !

ಗರ್ಭವತಿಯಾಗಿರೋ ಬಾಲಿವುಡ್ ಹೀರೋಯಿನ್ ಸೆಲಿನಾ ಜೇಟ್ಲಿ ಬಿಕಿನಿ ಫೋಟೊಗಳು ಇತ್ತೀಚೆಗೆ ಸೋಷಿಯಲ್ ಮೀಡಿಯಾಲದಲ್ಲಿ ಕಾಣಿಸಿಕೊಂಡು ಸೌಂಡ್ ಮಾಡಿತ್ತು. ಇದೀಗ ಒಂದು ಹೆಜ್ಜೆ ಮುಂದೆ ಬಾತ್ ಟಬ್ನಲ್ಲಿ ಬೆತ್ತಲಾಗಿ ಕ್ಯಾಮರಾಗೆ ಪೋಸ್ ಕೊಟ್ಟಿರೋ ಈ ಬ್ಯೂಟಿ ಆ ಫೋಟೊವನ್ನ ತನ್ನ ಇನ್ಸ್ಟ್ರಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ. ಫೋಟೊ ಜೊತೆಗೆ ದೊಡ್ಡದಾಗಿ ಒಂದು ಸಂದೇಶವನ್ನ ಬರೆದುಕೊಂಡಿದ್ದಾಳೆ ಸೆಲಿನಾ. ಪ್ರೆಗ್ನೆನ್ಸಿ ಸಮಯದಲ್ಲಿ ಶಾರೀರಿಕವಾಗಿ ಆಗೋ ಬದಲಾವಣೆಗಳನ್ನ ನೆಗೆಟೀವ್ ತಗೋಬೇಡಿ ಅನ್ನೋದು ಸಂದೇಶದ ಸಾರಾಂಶ.

ಗರ್ಭವತಿ ಆದ ಸಮಯದಲ್ಲಿ ಹೊಟ್ಟೆಯ ಜೊತೆಗೆ ದೇಹದ ಇತರೆ ಭಾಗಗಳಲ್ಲಿ ಆಗುವ ಬದಲಾವಣೆಗಳಿಗೆ ಹೆದರಬಾರದು. ಇವೆಲ್ಲಾ ಸಾಧಾರಣವಾಗಿ ನಡೆಯುವ ಬದಲಾವಣೆಗಳಷ್ಟೆ. ಪ್ರೆಗ್ನೆನ್ಸಿಯಿಂದ ಆಗೋ ಶಾರೀರಿಕ ಬದಲಾವಣೆಗಳು ಮಹಿಳೆಯರ ಆತ್ಮವಿಶ್ವಾಸವನ್ನ ಕುಗ್ಗಿಸಬಾರದು ಅಂತ ಹೇಳೋದು ಸೆಲಿನಾ ಜೇಟ್ಲಿಯ ಉದ್ದೇಶ. ಈ ಹಿಂದೆ ಅವಳಿ ಮಕ್ಕಳಿಗೆ ಜನ್ಮಕೊಟ್ಟಿದ್ದ ಸೆಲಿನಾಗೆ ಈ ಬಾರಿಯೂ ಅವಳಿ ಮಕ್ಕಳಾಗೋದು ಖಾತ್ರಿಯಾಗಿದೆ.

ಬಾಲಿವುಡ್ನಲ್ಲಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿರೋ ಸೆಲಿನಾ ಜೇಟ್ಲಿಗೆ ದೊಡ್ಡ ಸಕ್ಸಸ್ ಸಿಗ್ಲಿಲ್ಲ. ಕೊನೆಗೆ 2011ರಲ್ಲಿ ಪೀಟರ್ ಹಾಗ್ ಅನ್ನೋ ಆಸ್ಟ್ರೇಲಿಯಾ ವ್ಯಾಪಾರಿಯನ್ನ ಮದ್ವೆ ಮಾಡಿಕೊಂಡಿದ್ದಳು. ಇವರ ಅವಳಿ ಮಕ್ಕಳಿಗೆ ವಿರಾಜ್ ಮತ್ತು ವಿನ್ ಸ್ಟನ್ ಅಂತ ಹೆಸರಿಟ್ಟಿದ್ದಾರೆ. ಎರಡನೇ ಬಾರಿ ಗರ್ಭಿಣಿಯಾಗಿರೋ ಸೆಲಿನಾ ಇದೀಗ ಬೆತ್ತಲೆ ಫೋಟೊದಿಂದ ಸುದ್ದಿಯಲ್ಲಿದ್ದಾಳೆ.

Comments are closed.

Social Media Auto Publish Powered By : XYZScripts.com