ಉಳಿಪೆಟ್ಟು ನೀಡುವ ಶಿಲ್ಪಿಯಂತೆ ಶಿಕ್ಷಕ ವೃತ್ತಿ.. ನಿಂತ ನೀರಾಗದೆ ಸದಾ ಹರಿಯುತ್ತಿರಲಿ..

“ಧರೆಯ ಬದುಕೇನದರ ಗುರಿಯೇನು ಫಲವೇನು ?
ಬರಿ ಬಳಸು ಬಡಿದಾಟ ಬರಿ ಪರಿಭ್ರಮಣೆ ||
ತಿರುತಿರುಗಿ ಹೊಟ್ಟೆ ಹೊರಕೊಳುವ ಖಗಮೃಗಕಿಂತ
ನರನು ಸಾಧಿಪುದೇನು ಮಂಕುತಿಮ್ಮ
ಸೃಷ್ಟಿಯ ಶ್ರೇಷ್ಠಜೀವಿಯಾದ ಮನುಷ್ಯನ ಜೀವನದ ಉದ್ದೇಶ, ಕೇವಲ, ಓಡಾಟ. ಹೊಡೆದಾಟ, ಬಳಲಿಕೆ ಮಾತ್ರವ ಅಥವಾ ಪ್ರಾಣಿ ಪಕ್ಷಿಗಳ ಹಾಗೆ ಕೇವಲ ಹೊಟ್ಟೆ ತುಂಬಿಸಿಕೊಳ್ಳವದರಾಗಿ ಮಾತ್ರ ಶ್ರಮಿಸಿದಿರಿ ಅವುಗಳನ್ನು ಮೇಲಿ ಉತ್ತಮವಾದುದನ್ನು ಮಾಡಬೇಕು.
ಅಂತಹ ಶ್ರೇಷ್ಠತೆಯನ್ನು ಪಡೆಯಲು ಅವನಿಗೆ ಸಂಸ್ಕಾರ ಅತ್ಯಂತ ಪ್ರಮುಖವಾಗಿಬೇಕು ಸಂಸ್ಕಾರವೆಂಬ ಸಾಣಿಯ ಬ್ಲೇಡ್ ನಿಂದ ಮನುಷ್ಯನು ಮೊಣಚುಗೊಳ್ಳುತ್ತಾನೆ ಅದರಿಂದಲೇ ಅವನು ಒಂದು ಉತ್ತಮ ಕೆತ್ತನೆ ಮೂರ್ತಿಯಾಗಲು ಶಿಕ್ಷಣವೆಂಬ ಸಂಸ್ಕಾರ ಅತ್ಯಂತ ಅವಶ್ಯ.


‘ನ ಚೋರಹಾರ್ಯಂ, ನ ರಾಜ್ಯಹಾರಂ ನ ಛಾತೃ ಭಾಜ್ಯಂ ನ ಭಾರಕಾರಿ, ವ್ಯಯಕೃತೇ ವರ್ಧತೆ ಏವ ವಿದ್ಯಾಮರ್ಥ ಚ ಸಾಧಯೇತ್’
ಅಂದರೆ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಸಂಪತ್ತೆಂದರೆ ಅದು ವಿದ್ಯೆ ಮಾತ್ರ. ಅದನ್ನೇ ಸರ್ವಜ್ಞ ಈ ರೀತಿ ಹೇಳುತ್ತಾರೆ.
“ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು |
ವಿದ್ಯೆಯಿಲ್ಲದವನ ಬರೀ ಮುಖವು||
ಹಾಳೂರು ಹದ್ದಿನಂತಿಕ್ಕು ಸರ್ವಜ್ಞ ||”
ಆದರೆ ಕಾಲಬದಲಾದಂತೆ ವಿದ್ಯೆಯ ಸ್ವರೂಪವೂ ಕೂಡಾ ಬದಲಾಗುತ್ತಾ ಹೋಯಿತು ಆಗಿನ ಕಾಲದಲ್ಲಿ ಶಿಕ್ಷಣ ಬದುಕಿಗೆ ಪೂರಕವಾಗಿ, ಅದರಿಂದುಂಟಾದ ಸಂಸ್ಕಾರಗಳಿಂದ ತಮ್ಮ ಬದುಕಲ್ಲಿ ಉತ್ತಮ ಜೀವನ ನಡೆಸುತ್ತಿದ್ದರು ಆದರೆ ಈಗ ಬದಕೇ ಬೇರೆ ಶಿಕ್ಷಣವೇ ಬೇರೆ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಅಂದರೆ ಹುಟ್ಟಿದ ಪ್ರತಿ ಜೀವಿಯೂ ಶಿಕ್ಷಣವನ್ನು ಪಡೆಯುವದು ಎಲ್ಲರ ಹಕ್ಕು & ಕರ್ತವ್ಯ ಅದನ್ನು ಸದುಪಯೋಗಪಡಿಸುವದು ನಮ್ಮೆಲ್ಲರ ಕರ್ತವ್ಯ. ಶಿಕ್ಷಣ ಪಡೆಯುವದು ಬಲು ಕಷ್ಟದ ಕೆಲಸವಾಗಿತ್ತು ಒಂದು ಕಾಲದಲ್ಲಿ, ಆದರೆ ಶಿಕ್ಷಣ ಈಗ ಎಲ್ಲರಿಗೂ ಅತೀ ಸರಳವಾಗಿ ಕೈಗೆಟುಕುವ ಸಮೀಪದಲ್ಲಿ ಸಿಗುತ್ತದೆ.


ಶಿಕ್ಷಣವನ್ನು ಎಲ್ಲರಿಗೆ ದೊರಕುವಂತೆ ಮಾಡಲು ಅವರಿಗೆ ಉಚಿತ ಸಮವಸ್ತ್ರ, ಪಠ್ಯಪುಸ್ತಕ, ಊಟ, ಶೂ, ಕಡಿಮೆ ಫೀ, ಬೈಸಿಕಲ್ ನಂತಹ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪಾಲಕರು ಕೂಡಾ ಈ ಇತ್ತೀಚಿಗೆ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡುತ್ತಿದ್ದಾರೆ. ಇವೆಲ್ಲದರ ಸೌಲಭ್ಯ ಪಡೆದ ಮಕ್ಕಳು ಓದಿನತ್ತ ತಮ್ಮತನವನ್ನ ಗುರುತಿಸಿಕೊಳ್ಳುವರು. ಶಿಕ್ಷಣ ಎನ್ನುವದು ಕೇವಲ ಓದು ಬರಹವಾಗಿರದೇ ಒಂದು ಸಂಸ್ಕಾರವಾಗಬೇಕು. ಓದು ಬರಹದೊಂದಿಗೆ ಮೌಲ್ಯಗಳು ಜೊತೆಗೆ ವ್ಯಕ್ತಿ ಕ್ರಿಯಾಶೀಲವಾಗಿ ಬಾಳುವ ಅವಶ್ಯಕತೆ ಇದೆ.

ಫಿನ್‍ಲ್ಯಾಂಡ್ ಜಗತ್ತಿನಲ್ಲಿಯೇ ಒಂದು ಅತ್ಯಂತ ಸುಶಿಕ್ಷಿತರವನ್ನು ಹೊಂದಿದ ದೇಶ. ಮುಖ್ಯ ಕಾರಣ ಶಾಲೆಗಳು & ಮಾನವ ಸಂಪನ್ಮೂಲವಾದ ಶಿಕ್ಷಕ ವರ್ಗ ಹೌದು. ಮುಖ್ಯ ಶಿಕ್ಷಣ ವ್ಯವಸ್ಥೆಯ ಮುಖ್ಯ ಸ್ಥಂಭವಾದ ಶಿಕ್ಷಕರೇ ಇಲ್ಲಿನ ಶಿಕ್ಷಣ ವ್ಯವಸ್ಥೆ ಸುಭದ್ರವಾಗಿರಲು ಕಾರಣವಾಗಿದ್ದಾರೆ.
ಅಲ್ಲಿ ಶಿಕ್ಷಕ ವೃತ್ತಿ ಅತ್ಯಂತ ಗೌರವಾನ್ವಿತ, ಜವಾಬ್ದಾರಿಯುತವಾದ ಹುದ್ದೆಯಾಗಿದೆ.


ಒಂದು ಅಕಾಡೆಮಿಕ್ ವರ್ಷದಲ್ಲಿ ಒಬ್ಬ ಶಿಕ್ಷಕ ಮಾಡಬಹುದಾದ. ಜವಾಬ್ದಾರಿ ಅತ್ಯಂತ ವ್ಯವಸ್ಥಿತವಾಗಿ ಸ್ವತಂತ್ರವಾಗಿ, ಜವಾಬ್ದಾರಿಯುತವಾಗಿ ರೂಪಿಸಲ್ಪಟ್ಟಿದೆ. ಕೇವಲ ದಾಖಲೀಕರಣಕ್ಕೆ ಮಹತ್ವ ನೀಡದೆ, ನಿಜ ಅರ್ಥದಲ್ಲಿ ಅದು ಅನುಷ್ಠಾನಗೊಳ್ಳುವ ಕುರಿತು ರೂಪಿಸಲ್ಪಟ್ಟಿದೆ. ಅಷ್ಟೇ ಹೊರಹೊಮ್ಮಿದೆ. ಇದು ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಭದ್ರಗೊಳಿಸುವದು, ಮಾನವ ಸಂಪನ್ಮೂಲವನ್ನು ನಿಜ ಅರ್ಥದಲ್ಲಿ ಸಂಪನ್ಮೂಲಗೊಳಿಸುವದು.
“ಒಂದು ಪ್ರಜ್ವಲಿಸುವ ಮನಸು ಭೂಮಿಯ ಮೇಲೆ, ಭೂಮಿಯ ಒಳಗೆ ಭೂಮಿಯಲ್ಲಿರುವ ಅತ್ಯಂತ ಸಮರ್ಥ ಶಾಲಿ ಸಂಪನ್ಮೂಲ”
ಇಂತಹ ಸಂಪನ್ಮೂಲ ಎಂದರೆ ಮಾನವ ಸಂಪನ್ಮೂಲ ನಮ್ಮ ದೇಶದ ಬಹುದೊಡ್ಡ ಆಸ್ತಿ.
ಇಂತಹ ಆಸ್ತಿಗಳಿಸಲು ಶಿಕ್ಷಕರ & ಪಾಲಕರ ಪಾತ್ರ ಬಹುದೊಡ್ಡದು.
ಅದನ್ನೆ ಅಬ್ದುಲ ಕಲಾಂ ಈ ರೀತಿ ಹೇಳುತ್ತಾರೆ;
“ಕಲಿಕೆಯು ಉದ್ದೇಶಪೂರ್ವಕವಾಗಿದ್ದರೆ ಸೃಜನಶೀಲತೆ ಅರಳುತ್ತದೆ. ಸೃಜನಶೀಲತೆ ಅರಳಿದರೆ ಚಿಂತನೆಯು ಉದ್ಭವಿಸುತ್ತದೆ. ಚಿಂತನೆಯು ಉದ್ಭವಿಸಿದರೆ ಜ್ಞಾನವು ಪೂರ್ಣವಾಗಿ ಬೆಳಗುತ್ತದೆ ಜ್ಞಾನವು ಬೆಳಗಿದರೆ ಆರ್ಥಿಕತೆ ಅಭಿವೃದ್ಧಿತಯಾಗುತ್ತದೆ”.
ಹೌದು ಭಾರತದ ಭಾವೀ ಪ್ರಜೆಗಳ ಭವಿಷ್ಯ ಇರುವದೇ ಶಾಲೆಗಳಲ್ಲಿ. ಗುರುಗಳ ಕೈಯಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅಂದರೆ ಶಿಕ್ಷಣ ಪಡೆಯುವದು ಕೇವಲ ನೌಕರಿಗೋಸ್ಕರವಲ್ಲ ಎಂಬುದು ಅರ್ಥೈಯಿಸುವದು ಬಲು ಮುಖ್ಯ.
ಅಬ್ರಹಾಂ ಲಿಂಕನ್‍ರ ಸ್ನೇಹಿತರೊಬ್ಬರು ಅವರನ್ನು “ಯಾಕೆ ಅಷ್ಟೊಂದು ಓದುತ್ತೀರಿ ನೀವು? ಶಿಕ್ಷಣದಿಂದ ನಿಮ್ಮ ಜೀವನಕ್ಕೇನು ಲಾಭ?” ಎಂದು ಕೇಳಿದಾಗ,
ಲಿಂಕನ್‍ರು ಉತ್ತರಿಸಿದ ರೀತಿ ಮಾತ್ರ ಅದ್ಭುತವಾಗಿತ್ತು “ನಾನು ಜೀವನೋಪಾಯಕ್ಕಾಗಿ ಓದುತ್ತಿಲ್ಲ ನಾನು ಪಡೆಯುವ ಜೀವನವನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದಕ್ಕಾಗಿ ಓದುತ್ತಿದ್ದೇನೆ”. ಎಂದು ಲಿಂಕನ್ ಉತ್ತರಿಸಿದರು.
ಶಿಕ್ಷಣ ಎನ್ನುವದು ಮಾನವ ಜೀವನದ ಸರ್ವಾಂಗೀಣ ಪ್ರಗತಿಯ ಪ್ರತೀಕವಾಗಿರಬೇಕು.
ಇಲ್ಲಿ ಒಂದು ಕಥೆ ನೆನಪಾಗುವದು, ಒಮ್ಮೆ ಎಂಜನಿಯರನೊಬ್ಬ ಕಾರು ತಯಾರಿಸುವ ಸಂಸ್ಥೆಯಲ್ಲಿ ವಿಶ್ವವೇ ಬೆರಗಾಗುವಂತಹ ಮೋಹಕವಾದ ಕಾರನ್ನು ಡಿಸೈನ್ ಮಾಡಿ ತಯಾರಿಸಿದ, ಅದರಿಂದ ಮಾಲೀಕನಿಗೆ ತುಂಬಾ ಖುಷಿಯಾಯಿತು. ಆ ಎಂಜನೀಯರನ್ನು ತುಂಬಾ ಹೊಗಳಿದ, ಆದರೆ ಆ ಕಾರಲ್ಲಿ ಒಂದು ದೊಡ್ಡ ಲೋಪವಾಗಿರುವದು ಗಮನಕ್ಕೆ ಬಂದಿತು. ಅದೇನೆಂದರೆ ಕಾರನ್ನು ಹೊರ ತರಬೇಕಾದರೆ, ಆ ಕಾರಿನ ಮೇಲ್ಭಾಗ ಸ್ಪಲ್ಪ ತರಚುತ್ತಿತ್ತು. ಆದರೆ ಅಷ್ಟು ಅದ್ಭುತ ಕಾರಿಗೆ ಸ್ವಲ್ಪ ಧಕ್ಕೆಯಾದರೆ ಅದು ಗೌರವದ ಪ್ರಶ್ನೆ  ಕಾರಿನ ಪೇಂಟರ್ ಹೇಳಿದ ಅದನ್ನು ಹೊರತೆಗೆಯಲಿ ನಾನು ಮತ್ತೆ ಗೊತ್ತಾಗದ ರೀತಿ ಅದನ್ನು ಸರಿ ಪಡಿಸುತ್ತೇನೆ ಮತ್ತೊಬ್ಬವ ಹೇಳಿದ ಗಾಲಿಯ ಗಾಲಿಗಳನ್ನು ತೆಗೆದು ಎತ್ತೋಣ. ಮತ್ತೊಬ್ಬ ಮೇಲ್ಚಾವಣೆಯನ್ನು ತೆಗೆಯಲು ಹೇಳಿದ.ಆದರೆ ಕಾರಿನ ಚಾಲಕ ಹೇಳಿದ-“ಗಾಲಿಗಳ ಹವೆ ತೆಗೆದರೆ ಆಯಿತು “ ಇಂತಹ ಅನ್ವಯಿಕ ಶಿಕ್ಷಣ ಬೇಕಾಗಿದೆ.


ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿರುವದು ನಮ್ಮ ಪುಣ್ಯವೇ ಸರಿ. ಇದೊಂದು ಸಮಾಜ ಸೇವೆಯೇ ಸರಿ. ನಾವು ಸಮರ್ಥವಾಗಿ ಕೆಲಸ ಮಾಡಿದರೆ ನಮ್ಮೀ ಇಲಾಖೆ ಪ್ರಬಲಗೊಳ್ಳುತ್ತದೆ. ನಮ್ಮ ಇಲಾಖೆ ಕೇವಲ ನಮಗೆ ಸೀಮಿತವಲ್ಲ. ನಮ್ಮ ನಂತರವೂ ಈ ವೃತ್ತಿ ಬದುಕು ಮುಂದುವರೆಯುವದು.
ನಾವು ನಮ್ಮ ವೃತ್ತಿ ಬದುಕು ಪ್ರಾರಂಭಿಸಿದಾಗ ನಮ್ಮದೇ ಒಂದು ಗುರಿ ಇರಬೇಕು. ಇಲ್ಲಿಯ ಕ್ಷಣಗಳನ್ನು ವ್ಯರ್ಥ ಮಾಡದೇ ನಮ್ಮ ದಿನ – ನಿತ್ಯದ ಎಲ್ಲ ದಿನಗಳನ್ನೂ ಒಂದು ಒಳ್ಳೆಯ ಮನಸ್ಸಿನಿಂದ ಪ್ರೀತಿಯಿಂದ ಮಾಡೋಣ.
ಬುದ್ಧನ ಕತೆ ಇದನ್ನು ಕನ್ನಡದಲ್ಲಿ ಓದುವದಕ್ಕಿಂತ ಇಂಗ್ಲೀಷನಲ್ಲೇ ಓದಿದರೆ, ಹೆಚ್ಚು ಮನಮುಟ್ಟುವದೇನೋ ಎಂದು ಅದನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ.
ಎಲ್ಲವನ್ನು ಬಲ್ಲ ಪ್ರಬುದ್ಧ ಬುದ್ಧನನ್ನು ಒಬ್ಬ ಶಿಷ್ಯ ಈ ರೀತಿ ಕೇಳಿದನಂತೆ;

What is the difference between “I like you” and “I love you”

Beautifully answered by Budda.

“When you like a flower, you just pluck it

But when you love a flower you water it daily”

ಇದರರ್ಥ ಇಷ್ಟೇ ನಾವು ನಮ್ಮ ವೃತ್ತಿ-ಬದುಕನ್ನು ಅಂದರೆ ನಮ್ಮ ಶಿಕ್ಷಕ ವೃತ್ತಿಯನ್ನು ಪ್ರೀತಿಸಿದಷ್ಟು ನಮ್ಮ ಪರಿಸರ, ಮಕ್ಕಳು ಸುಂದರವಾಗುತ್ತದೆ. ನಮ್ಮ ಸಾಧನೆಯೂ ಬೆಳೆಯುತ್ತದೆ.
ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಈ ರೀತಿ ಹೇಳುತ್ತಾರೆ;
“ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ.
ಮರದೇವರು ದೇವರಲ್ಲ, ಪಂಚ ಲೋಹದಲ್ಲಿ ಮಾಡಿದ ದೇವರು ದೇವರಲ್ಲ.
ಸೇತು ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮೊದಲಾಗಿ ಅಷ್ಟಾಷಷ್ಟಿ ಕೋಟಿ ಪುಣ್ಯ ಕ್ಷೇತ್ರಗಳಲ್ಲಿನ ದೇವರು ದೇವರಲ್ಲ. ತನ್ನ ತಾನರಿದು ತಾನಾರೆಂಬುದು ತಿಳಿದಡೆ ತಾನೇ ದೇವ ನೋಡಾ ಅಪ್ರಮಾಣ ಕೂಡಲ ಸಂಗಮದೇವ”
ಎನ್ನುವಂತೆ ವೃತ್ತಿ ಜೀವನದಲ್ಲಿ ಅನೇಕ ಘಟನೆಗಳು ನಡೆಯುತ್ತವೆ. ಆ ಎಲ್ಲ ಅನುಭವಗಳನ್ನು ತನ್ನರಿವಿನ ಮೂಲಕ ನಮ್ಮ ಭವಿಷ್ಯದ ಸಾಧನೆಯತ್ತ ಮುನ್ನಡೆಯಬೇಕು. ಇಲ್ಲಿ ಮುಖ್ಯವಾಗಿ ಬೇಕಾಗಿರುವದು ತಾಳ್ಮೆ ಮುಖ್ಯ. ನಮ್ಮ ತಾಳ್ಮೆ ಆತ್ಮವಿಶ್ವಾಸ ಮತ್ತು ಪ್ರಯತ್ನಗಳೇ ಮುಖ್ಯ.
ಇಲ್ಲಿ ನಮ್ಮ ಮುಖ್ಯ ಗುರಿ ವಿದ್ಯಾರ್ಥಿಗಳ ಗುಣಾತ್ಮಕ ಶಿಕ್ಷಣದೊಂದಿಗೆ ಮೌಲ್ಯಿಯುತ ಜೀವನ ನಡೆಸಲು ಸಿದ್ಧರಾಗಿಸುವದು. ನಾವು ನಮ್ಮ ವೃತ್ತಿಜೀವನದಲ್ಲಿ ನಮ್ಮದೇ ಗುರುತು ಸಕಾರಾತ್ಮಕ ಚಿಂತನೆ ಮುಖ್ಯ. ಒಂದು ಮಾತಿದೆ ಏನೆಂದರೆ;


ಪ್ರತಿ ಕೆಟ್ಟ ಘಳಗೆಯಲ್ಲಿ ಏನಾದರೂ ಒಳ್ಳೆಯದು ಇದ್ದೇ ಇರುತ್ತದೆ. ನಿಂತು ಹೋದ ಗಡಿಯಾರವೂ ದಿನದಲ್ಲಿ ಎರಡು ಬಾರಿ ಸರಿಯಾದ ಸಮಯ ತೋರಿಸುತ್ತದೆ. ಆದ್ದರಿಂದ ನಮ್ಮ ಸುತ್ತಲಿನ ಘಟನೆಗಳು ಸನ್ನಿವೇಶಗಳನ್ನು ಆದಷ್ಟು ಸಕಾರಾತ್ಮಕ ಮತ್ತು ಸಹನೆಯಿಂದ ನೋಡೋಣ.
ನಮ್ಮ ಈ ವೃತ್ತಿ ಬದುಕು ನಿಂತ ನೀರಾಗದೇ ಸದಾ ಹರಿಯುವ ನದಿಯಂತೆ ಅಲ್ಲದೇ ಅದು ಒಂದು ಉಳಿಪೆಟ್ಟು ನೀಡುವ ಶಿಲ್ಪಿಯ ತರಹ. ಅಂದರೆ, ಒಂದು ಉಳಿಯಪೆಟ್ಟು ಹಲವಾರು ಸಲ ಹಾಕಿದಾಗ ಮಾತ್ರ ಕಲ್ಲು ಒಡೆಯುವದು. ಕೇವಲ ಒಂದೇ ಪೆಟ್ಟಿನಿಂದಲ್ಲ. ಹಾಗೆಂದ ಮಾತ್ರಕ್ಕೆ ಕೇವಲ ಕೊನೆಯ ಒಂದು ಪೆಟ್ಟಿನಿಂದ ಮಾತ್ರ ಫಲ ನೀಡಿತೆಂದರ್ಥವಲ್ಲ. ಅದು ನಿರಂತರ ಪ್ರಯತ್ನದ ಫಲ. ಬದುಕಿನಲ್ಲಿಯೂ ಯಾವುದೇ ಯಶಸ್ವಿಗೆ ನಿರಂತರ ಪ್ರಯತ್ನ ಮತ್ತು ಶ್ರದ್ಧೆ ಮುಖ್ಯ.

5 thoughts on “ಉಳಿಪೆಟ್ಟು ನೀಡುವ ಶಿಲ್ಪಿಯಂತೆ ಶಿಕ್ಷಕ ವೃತ್ತಿ.. ನಿಂತ ನೀರಾಗದೆ ಸದಾ ಹರಿಯುತ್ತಿರಲಿ..

 • October 18, 2017 at 4:22 PM
  Permalink

  Hello! This is kind of off topic but I need some guidance from an established blog. Is it hard to set up your own blog? I’m not very techincal but I can figure things out pretty quick. I’m thinking about creating my own but I’m not sure where to begin. Do you have any tips or suggestions? Thanks

 • October 21, 2017 at 3:01 AM
  Permalink

  Viagra Pfizer Acquisto viagra Amoxicillin Stomach Pain Cs Online Support24 Propecia Hair Thickening

 • October 24, 2017 at 3:03 PM
  Permalink

  One more thing I would like to convey is that rather than trying to fit all your online degree courses on times that you finish work (as most people are tired when they get home), try to obtain most of your lessons on the saturdays and sundays and only a couple courses in weekdays, even if it means a little time off your weekend break. This is really good because on the week-ends, you will be extra rested along with concentrated with school work. Thx for the different suggestions I have discovered from your web site.

 • October 24, 2017 at 3:49 PM
  Permalink

  Thanks a lot for giving everyone such a special chance to discover important secrets from this web site. It’s always so beneficial and packed with a great time for me personally and my office friends to visit the blog at a minimum three times per week to find out the fresh secrets you have. Of course, we are always contented concerning the unbelievable principles you serve. Selected two areas in this article are completely the most efficient I’ve ever had.

Comments are closed.

Social Media Auto Publish Powered By : XYZScripts.com