WATCH : ಸಲ್ವಾರ್ ಕಮೀಜ್ ಧರಿಸಿ WWE ನಲ್ಲಿ ಫೈಟ್ ಮಾಡಿದ ಭಾರತೀಯ ಮಹಿಳೆ..!

ಭಾರತದ ಮಹಿಳೆಯೊಬ್ಬಳು ವರ್ಲ್ಡ್ ರೆಸಲಿಂಗ್ ಎಂಟರ್ಟೇನ್ಮೆಂಟ್ ನಲ್ಲಿ ಸಲ್ವಾರ್ ಕಮೀಜ್ ಧರಿಸಿ ಫೈಟ್ ಮಾಡಿದ್ದಾರೆ. ಇದುವರೆಗೆ ದಿ ಗ್ರೇಟ್ ಖಲಿ ಭಾರತವನ್ನು ಪ್ರತಿನಿಧಿಸಿ ಜನಪ್ರಿಯತೆ ಗಳಿಸಿದ್ದರು. ಇದೀಗ ಭಾರತದ ಮಹಿಳೆ ಕವಿತಾ ದೇವಿ WWE ಅಖಾಡಕ್ಕೆ ಇಳಿದಿದ್ದಾರೆ. ಹರಿಯಾಣ ಮೂಲದ ಕವಿತಾ ದೇವಿ, ಸಲ್ವಾರ್ ಕಮೀಜ್ ಧರಿಸಿ, ದುಪಟ್ಟಾ ಅನ್ನು ತನ್ನ ಸೊಂಟಕ್ಕೆ ಸುತ್ತಿಕೊಂಡು ನ್ಯೂಜಿಲೆಂಡ್ ನ ಡಕೋಟಾ ಕಾಯಿ ಅವರೊಂದಿಗೆ ಫೈಟ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಕವಿತಾ ಗೆಲುವು ಸಾಧಿಸದಿದ್ದರೂ, ಭಾರತೀಯ ವೀಕ್ಷಕರ ಮೆಚ್ಚುಗೆಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಟ್ವಿಟರ್ ನಲ್ಲಿ ಹಲವಾರು ವೀಕ್ಷಕರು ಕವಿತಾ ದೇವಿ ಅವರನ್ನು ಪ್ರಶಂಸಿದ್ಧಾರೆ. ಈ ಫೈಟ್ ನ ವಿಡಿಯೋವನ್ನು WWE ಯುಟ್ಯೂಬ್ ಗೆ ಅಪ್ಲೋಡ್ ಮಾಡಿದ್ದು, 3 ಮಿಲಿಯನ್ ಜನರಿಂದ ನೋಡಲ್ಪಟ್ಟಿದೆ.

Comments are closed.

Social Media Auto Publish Powered By : XYZScripts.com