ಬ್ಲೂವೇಲ್‌ ಗೇಮ್‌ : ತಾಯಿಯ ಜೀವಕ್ಕೆ ಹಾನಿಯಾಗುತ್ತದೆಂದು ಹೆದರಿ ನದಿಗೆ ಹಾರಿದ ಬಾಲಕಿ

ಜೋಧ್‌ಪುರ : ಕಳೆದ ರಾತ್ರಿ ಬ್ಲೂವೇಲ್‌ ಗೇಮ್‌ನಿಂದ ಕೈ ಮೇಲೆ ತಿಮಿಂಗಿಲದ ಚಿತ್ರ ಕೆತ್ತಿಕೊಂಡು ನದಿಗೆ ಹಾರಿದ್ದ ವಿದ್ಯಾರ್ಥಿನಿಯನ್ನು ರಾಜಸ್ಥಾನದ ಜೋಧ್‌ಪುರದಲ್ಲಿ ರಕ್ಷಿಸಲಾಗಿದೆ. ನಾನು ಈ ಟಾಸ್ಕನ್ನು ಪೂರೈಸದೇ ಇದ್ದರೆ ನನ್ನ ತಾಯಿ ಸಾಯುತ್ತಾರೆ ಎಂದು ಬಾಲಕಿ ಪೊಲೀಸರಿಗೆ ಹೇಳಿದ್ದಾಳೆ.

ಕೆಲ ಸಮಯದಿಂದ ಬಾಲಕಿ ತನ್ನ ಸ್ಕೂಟರ್‌ನಲ್ಲಿ ನದಿಯ ಬಳಿ ಸುತ್ತುತ್ತಿದ್ದಳು. ಬಳಿಕ ಬೈಕ್‌ ನಿಲ್ಲಿಸಿ ನೀರಿಗೆ ಹಾರಿದ್ದಾಳೆ. ಇದನ್ನು ನೋಡಿದ ಪೊಲೀಸರು ಕೂಡಲೆ ಆಕೆಯನ್ನು ನೀರಿನಿಂದ ಹೊರಗೆ ಕರೆ ತಂದಿದ್ದಾರೆ. ಬಾಲಕಿ ಬಿಎಸ್‌ಎಫ್‌ ಯೋಧರೊಬ್ಬರ ಮಗಳಾಗಿದ್ದು, ಸೋಮವಾರ ಸಂಜೆ ಮಾರ್ಕೆಟ್‌ಗೆ ಹೋಗುವುದಾಗಿ ಹೇಳಿ ಮನೆಯಿಂದ ತೆರಳಿದ್ದಳು.
ಆಕೆ ಜೋರಾಗಿ ಅಳುತ್ತಿದ್ದಳು. ಆಕೆ ನದಿಗೆ ಹಾರುತ್ತಾಳೆಂದು ತಿಳಿದು ಆಕೆಯನ್ನು ಹಿಂಬಾಲಿಸುತ್ತಿದ್ದೆ. ಜೊತೆಗೆ ಆಕೆಯ ಬಳಿ ಏನಾಯಿತು ಎಂದು ಕೇಳಿದೆ. ಅದಕ್ಕೆ ಆಕೆ ನನ್ನ ತಾಯಿ ಸಾಯುತ್ತಾರೆ ಎಂದು ಉತ್ತರಿಸಿದಳು. ನಿನ್ನ ತಾಯಿ ಯಾಕೆ ಸಾಯುತ್ತಾರೆ ಎಂದು ಕೇಳಿದೆ. ತನ್ನ ಟಾಸ್ಕ್‌ ಮುಗಿಯುತ್ತಾ ಬಂದಿದೆ. ಅದನ್ನು ನಾನು ಮುಗಿಸದಿದ್ದರೆ ನನ್ನ ತಾಯಿ ಸಾಯುತ್ತಾರೆ ಎಂದಿದ್ದಳು ಎಂದು ಸ್ಥಳೀಯ ನಿವಾಸಿ ಓಂಪ್ರಕಾಶ್‌ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com