ನಮ್ಮೂರಿನ ಎಮ್ಮೆ ಅಲ್ಲಾ ಅಂದ್ರೂ ಹಾಲು ಕೊಡುತ್ತೆ, ಗೋವಿಂದ ಅಂದ್ರೂ ಕೊಡುತ್ತೆ : ಪುಟ್ಟಣ್ಣಯ್ಯ

ಬೆಂಗಳೂರು : ನಮ್ಮ ಊರಿನ ಎಮ್ಮೆಗೆ ಯಾವ ಧರ್ಮದ ಬೇಧಾನೂ ಇಲ್ಲ. ಅಲ್ಲಾಹೋ ಅಕ್ಬರ್‌ ಅಂದ್ರೂ ಹಾಲು ಕೊಡುತ್ತೆ. ವೆಂಕಟರಮಣ ಗೋವಿಂದ ಅಂದರು ಹಾಲು ಕೊಡುತ್ತದೆ. ಈ ಎಮ್ಮೆನೇ ಪ್ರಧಾನಿಯಾಗಿರಬೇಕು ಎಂದೆನಿಸುತ್ತದೆ ಎಂದು ರೈತ ಮುಖಂಡ ಕೆ.ಎಸ್‌ ಪುಟ್ಟಣ್ಣಯ್ಯ ಹೇಳಿದ್ದಾರೆ.

ನಾನು ಮೋದಿ ಪ್ರಮಾಣವಚನ ಕಾರ್ಯಕ್ರಮಕ್ಕೆ ಹೋಗಿದ್ದೆ. ಅಲ್ಲಿ ಒಬ್ರೇ ಒಬ್ಬರು ರೈತರು, ದಲಿತರು ಭಾಗಿಯಾಗಿರಲಿಲ್ಲ. ಎಲ್ಲರೂ ಕಾರ್ಪೊರೇಟ್‌ ಜಗತ್ತಿನವರೇ ಇದ್ದರು ಎಂದಿದ್ದಾರೆ.

ಇದೇ ವೇಳೆ ಶ್ರೀರಾಮನ ಬಗ್ಗೆ ವಿವಿದಾತ್ಮಕ ಹೇಳಿಕೆ ನೀಡಿದ್ದು, ತುಂಬು ಬಸಿರಿಯನ್ನು ಕಾಡಿಗಟ್ಟಿದ ಶ್ರೀರಾಮನ ಯಾಕೆ ಮಹಿಳೆಯರು ಪೂಜೆ ಮಾಡ್ತೀರಾ, ರಾಮ ರಾಮ ಅನ್ನುತ್ತಾ ಮನೆ ಮುಂದೆ ಯಾಕ್ರೀ ರಂಗೋಲಿ ಹಾಕ್ತೀರಾ?. ಹೆಂಡತಿಯನ್ನೇ ಕಾಡಿಗಟ್ಟಿದವನು ಅವನು ಎಂದಿದ್ದಾರೆ. ಇದೇ ವೇಳೆ ರೈತರ ಬಗ್ಗೆ ಹೇಳಿಕೆ ನೀಡಿದ ಪುಟ್ಟಣ್ಣಯ್ಯ ನಮ್ಮ ಅಪ್ಪನಾಣೆ ಈ ರೈತರು ಒಂದಾಗಲ್ಲ. ನಮಗೂ ಈ ಬ್ಲಾಸ್ಟ್‌ ಆಗಿರೋ ಟೈಯರ್‌ಗೆ ಪಂಪ್‌ ಮಾಡಿ ಮಾಡಿ ಸಾಕಾಗಿದೆ ಎಂದಿದ್ದಾರೆ.

 

 

Comments are closed.

Social Media Auto Publish Powered By : XYZScripts.com