Exclusive : ಜಾರಿ ಬಿದ್ದು ಕಾಲು ಮುರಿದುಕೊಂಡ ನಟ ಸುದರ್ಶನ್‌ : ಸಾಗರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ

ಬೆಂಗಳೂರು : ಮುಂಜಾನೆ ಸ್ನಾನಕ್ಕೆ ತೆರಳುವಾಗ ಕಾಲು ಜಾರಿ ಬಿದ್ದು ಹಿರಿಯ ನಟ ಸುದರ್ಶನ್‌ ಅವರಿಗೆ ಕಾಲು ಮುರಿತ ಉಂಟಾಗಿದೆ. ಬಲಗಾಲಿನ ಮೂಳೆ ಮುರಿದಿದ್ದು ಬನ್ನೇರು ಘಟ್ಟದ ರಸ್ತೆಯಲ್ಲಿರುವ ಸಾಗರ್‌ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾಲಿಗೆ ಹೆಚ್ಚಿನ ಪೆಟ್ಟು ಬಿದ್ದಿರುವ ಕಾರಣ ನಾಳೆ ಶಸ್ತ್ರ ಚಿಕಿತ್ಸೆ ನಡೆಸುವುದಾಗಿ ವೈದ್ಯರು ತಿಳಿಸಿದ್ದಾರೆ. ಸುದರ್ಶನ್‌ ಅವರಿಗೆ ಮೊದಲೇ ಮಧುಮೇಹ ಹಾಗೂ ಹೃದಯದ ತೊಂದರೆ ಇದ್ದು, ಶಸ್ತ್ರ ಚಿಕಿತ್ಸೆಗೆ ಹೆಚ್ಚಿನ ಸಮಯಾವಕಾಶ ಬೇಕಾಗಬಹುದು ಎಂದಿದ್ದಾರೆ.

Comments are closed.

Social Media Auto Publish Powered By : XYZScripts.com