‘ಸ್ಟಾರ್ ಇಂಡಿಯಾ’ ಮಡಿಲಿಗೆ IPL ಪ್ರಸಾರದ ಹಕ್ಕು, 16347 ಕೋಟಿಗೆ ಖರೀದಿ..!

ಇಂಡಿಯನ್ ಪ್ರಿಮಿಯರ್ ಲೀಗ್ ನ ಮಾಧ್ಯಮ ಪ್ರಸಾರದ ಹಕ್ಕನ್ನು ‘ಸ್ಟಾರ್ ಇಂಡಿಯಾ’ 16347.50 ಕೋಟಿ ನೀಡಿ ಖರೀದಿಸಿದೆ. 2018 ರಿಂದ 2022 ರವರೆಗೆ 5 ವರ್ಷದ ಐಪಿಎಲ್ ಪಂದ್ಯಾವಳಿಗಳ ಮಾಧ್ಯಮ ಹಕ್ಕನ್ನು ಪಡೆದುಕೊಳ್ಳುವ ಸಲುವಾಗಿ, ಮುಂಬೈನಲ್ಲಿ ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಇದಕ್ಕೂ ಮೊದಲು ಈ ಹಕ್ಕು ‘ಸೋನಿ ಪಿಕ್ಚರ್ಸ್’ ವಾಹಿನಿಯದಾಗಿತ್ತು.

Image result for star india ipl media rights

ಈ ಮೊದಲು ಐಪಿಎಲ್ ನ ಒಂದು ಪಂದ್ಯದ ಮೌಲ್ಯ 15 ಕೋಟಿಗಳಾಗಿತ್ತು, ಆದರೆ ಈಗ 55 ಕೋಟಿಗಳಷ್ಟಾಗಿದೆ. ಇದು ಟೀಮ್ ಇಂಡಿಯಾ ಆಡುವ ಒಂದು ಪಂದ್ಯದ ಮೌಲ್ಯಕ್ಕಿಂತ (43 ಕೋಟಿ) ಹೆಚ್ಚಾಯಿತು.  ‘2008 ರಿಂದ ಐಪಿಎಲ್ ಹಾಗೂ ಭಾರತೀಯ ಕ್ರಿಕೆಟ್ ನಲ್ಲಿ ತುಂಬ ಬದಲಾವಣೆಗಳಾಗಿವೆ, ಈ ಹರಾಜು ಪ್ರಕ್ರಿಯೆ ಅದಕ್ಕೆ ಸಾಕ್ಷಿ ‘ ಎಂದು ಸ್ಟಾರ್ ಗ್ರೂಪ್ ನ ಸಿಇಓ ಉದಯ್ ಶಂಕರ್ ಮಾಧ್ಯಮಗಳಿಗೆ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com