ರಾಜೀನಾಮೆ ಕೊಡಕ್ಕೆ ನಾನು ಬ್ಲೂಫಿಲ್ಮ್ ನೋಡಿದೀನಾ? ಜೈಲಿಗೆ ಹೋಗಿದ್ನಾ? : ರಮಾನಾಥ್ ರೈ

ಬಿಜೆಪಿ ನಾಯಕರು ರಾಜಿನಾಮೆಗೆ ಒತ್ತಾಯಿಸಿರುವುದಕ್ಕೆ ಪ್ರತಕ್ರಿಯಿಸಿರುವ ಅರಣ್ಯ ಸಚಿವ ರಮಾನಾಥ್ ರೈ ಹೇಳಿಕೆ ನೀಡಿದ್ಧಾರೆ. ‘ ಎರಡು ಮತೀಯವಾಧಿಗಳನ್ನ ನಾವು ವಿರೋಧ ಮಾಡುತ್ತೇವೆ. ನಾವು ಜ್ಯಾತತೀತವಾಗಿ ಕೆಲಸ ಮಾಡುತ್ತಿದ್ದೇವೆ. ಕೋಮು ಸಂಘರ್ಷವನ್ನ ಪ್ರಯತ್ನ ಮಾಡಿ ಲಾಭ ಪ್ರಯತ್ನ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಜನ್ರು ಸಹಕಾರ ನೀಡೋದಿಲ್ಲ ಎಂಬ ನಂಬಿಕೆ ಇದೆ. ರಾಜಕೀಯಕ್ಕಾಗಿ ಬಿಜೆಪಿಯವ್ರು
ಈ ರೀತಿ ರ್ಯಾಲಿ ಮಾಡುತ್ತಿದ್ದಾರೆ. ಬೆಳಗ್ಗೆ ಸಂಘಪರಿವಾರ ನಮ್ಮ ರಾಜೀನಾಮೆ ಕೇಳುತ್ತೆ. ಸಂಜೆ ಎಫ್ ಡಿಐ ಸಂಘಟನೆ ರಾಜೀನಾಮೆಗೆ ಆಗ್ರಹಿಸುತ್ತೆ. ಸರ್ಕಾರ ಒಳ್ಳೆಯ ಕೆಲಸಗಳನ್ನ ಮಾಡುತ್ತಿದೆ. ಅಧಿಕಾರವಿಲ್ಲದ ಹಿನ್ನೆಲೆ ಬಿಜೆಪಿ ಇಂತ ಕೆಲಸಕ್ಕೆ ಕೈಹಾಕಿದೆ. ಕೋಮು ಸಂಘರ್ಷ ಉಂಟುಮಾಡುವ ಕೆಲಸ ಮಾಡುತ್ತಿದೆ. ಅವರು ಕೇಂದ್ರದ ಮೇಲೆ ಚಲೋ ಕಾರ್ಯಕ್ರಮ ಮಾಡಲಿ. ಆಗ ಸಂಘಟನೆಗಳ ನಿಷೇಧ ಸಾಧ್ಯವಾಗಲಿದೆ. ಬಿಜೆಪಿ ಬೈಕ್ ರ್ಯಾಲಿ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದ್ರೆ ಕಾನೂನು ಕ್ರಮ ಕೈಗೆತ್ತಿಕೊಂಡ್ರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಬಿಜೆಪಿ ಅವ್ರು ಕಾರ್ಯಕ್ರಮ ಮಾಡಲಿ.
ಮಂಗಳೂರು ಬಿಜೆಪಿಯವರ ನಾಗಪುರ ವಿದ್ದಂತೆ. ಹೀಗಾಗಿ ಅಲ್ಲಿ ಮತೀಯ ಕ್ಷೇತ್ರ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆದರೆ ಅವರ ಉದ್ದೇಶಗಳು ಈಡೇರುವುದಿಲ್ಲ. ಇವರ ಯಾವುದೇ ನಾಟಕ ನಡೆಯುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ.

Image result for ramanath rai

ರಮಾನಾಥ್ ರೈ ರಾಜೀನಾಮೆಗೆ ಬಿಜೆಪಿ ಆಗ್ರಹ ವಿಚಾರವಾಗಿ ಮಾತನಾಡಿ ‘ನಾನು ಮತೀಯವಾಧಿಯು ಅಲ್ಲ..ಜಾತೀವಾಧಿಯು ಅಲ್ಲ. ನಾನೇನು ತಪ್ಪು ಮಾಡಿದ್ದೀನಿ ರಾಜೀನಾಮೆ ನೀಡೋದಕ್ಕೆ? ನಾನೇನು ಜೈಲಿಗೆ ಹೋಗಿದ್ದೀನಾ? ನಾನೇನು ಬ್ಲೂಫಿಲಂ ನೋಡಿದ್ದೀನಾ? ನಾನೇನು ಗಣಿಗಾರಿಕೆ ಮಾಡಿದ್ದೇನಾ? ರಘುಪತಿ ಭಟ್ ಕಥೆ ಏನು..? ಮಾತಾಡಿದ್ರೆ ಎಲ್ಲ ಕಥೆ ಹೇಳಬೇಕಾಗುತ್ತೆ ‘ ಎಂದು ಬಿಜೆಪಿ ನಾಯಕರ ವಿರುದ್ಧ ವ್ಯಂಗ್ಯ ಮಾಡಿದ ರಮಾನಾಥ್ ರೈ ಹೇಳಿಕೆ ನೀಡಿದ್ಧಾರೆ.

 

Comments are closed.

Social Media Auto Publish Powered By : XYZScripts.com