ಮನೆಗೊಂದು ಮೊಬೈಲ್‌ ಇದೆ, ಶೌಚಾಲಯ ಯಾಕಿಲ್ಲ: ಜನರಿಗೆ ಅರಿವು ಮೂಡಿಸಲು ವಿನೂತನ ಜಾಥಾ

ಮೈಸೂರು: ಶಿಕ್ಷಕರು, ಶಾಲಾ ವಿದ್ಯಾರ್ಥಿಗಳು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೌಚಾಲಯ ನಿರ್ಮಾಣಕ್ಕಾಗಿ  ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಹರದನಹಳ್ಳಿ ಗ್ರಾಮ ಪಂಚಾಯಿತಿಯಲ್ ಜಾಥಾ ನಡೆಸಲಾಗುತ್ತಿದೆ.

ಶಾಲಾ ಮಕ್ಕಳು ಮನೆ ಮನೆಗೆ ಭೇಟಿ ನೀಡಿ ಗುಲಾಬಿ ಹೂವನ್ನು ವಿತರಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಬಯಲು ಮುಕ್ತ ಶೌಚಾಲಯಕ್ಕಾಗಿ ಗ್ರಾಮಪಂಚಾಯಿತಿ ಪಿಡಿಒ ಹಾಗೂ ಅಧ್ಯಕ್ಷರು ಪಣ ತೊಟ್ಟಿದ್ದು, ಮನೆಗೊಂದು ಮೊಬೈಲ್ ಇದೆಯಾದರೂ ಶೌಚಾಲಯ ಏಕಿಲ್ಲ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಜೊತೆಗೆ ಶೌಚಾಲಯ ನಿರ್ಮಾಣಕ್ಕಾಗಿ ಜೆಸಿಬಿ ಮುಖಾಂತರ ಗ್ರಾಮದ ಆಯ್ದ ಸ್ಥಳಗಳಲ್ಲಿ ಗುಂಡಿ ತೆಗೆಸಲು ಚಾಲನೆ ಚಾಲನೆ ನೀಡಲಾಗಿದೆ.

 

Comments are closed.

Social Media Auto Publish Powered By : XYZScripts.com