ಗಣಿ, ಭಟ್ಟರ ಮುಖದಲಿ ಮುಗಳು ನಗೆ : ಬಾಕ್ಸ್ ಆಫೀಸ್ ನಲ್ಲಿ ಹರಿಯುತಿದೆ ಹಣದ ಹೊಳೆ..

ಮುಗಳು ನಗೆ ಹಿಟ್ ಆಗಿದೆ. ಮಳೆ ಸುರಿದರೂ ಸರಿ. ಜನ ಥಿಯೇಟರ್ ಗೆ ಬರ್ತಿದ್ದಾರೆ. ಗಣಿ ಮತ್ತು ಭಟ್ಟರ ಮೋಡಿ ಚಂದನವದಲ್ಲಿ ಈಗ ಮತ್ತೆ ಶುರು ಆಗಿದೆ. ಎರಡೇ ಎರಡು ದಿನಕ್ಕೆ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ ಮುಗುಳು ನಗೆ. ಬನ್ನಿ, ಇದರ ವಿವರ ಹೇಳ್ತೀವಿ…


ಮುಗುಳು ನಗೆ ಕಲೆಕ್ಷನ್ ಎಷ್ಟು ಗೊತ್ತೇ..?
ಮುಗುಳು ನಗೆ ಮೋಡಿ ಸಖತ್ ಆಗಿಯೇ ಇದೆ. ಮಹಿಳೆಯರ ದಿಲ್ ಕದ್ದ ಈ ನಗೆ, ಗಂಡ್ಮಕ್ಕಳ ಮನಸನ್ನೂ ಗೆದ್ದಿದೆ. ಕಥೆಯ ಮೂಲಕ, ಹಾಡಿನ ಮೂಲಕ, ಮುಗುಳು ನಗೆ ಪ್ರೇಕ್ಷಕರ ಮನದಲ್ಲಿ ಮಂದಹಾಸವನ್ನೂ ಮೂಡಿಸಿದೆ. ಕೊನೆ ಕೊನೆಗೆ ಹೃದಯದಲ್ಲಿ ಭಾವುಕ ಅಲೆಯನ್ನೂ ಎಬ್ಬಿಸುತ್ತದೆ.
ಮೊದಲ ದಿನ ಹೇಗಿತ್ತು ರೆಸ್ಪಾನ್ಸ್ ?
ಮುಗುಳು ನಗೆ ಮೊದಲ ದಿನ ಮಾಸಿವ್‌ ಓಪನಿಂಗ್ ಪಡೆದಿಲ್ಲ. ಆದರೆ,  ರೆಸ್ಪಾನ್ಸ್ ಅದ್ಭುತವಾಗಿಯೇ ಬಂದಿದೆ. ವೆರಿ ಗುಡ್ ಅನ್ನೋ ಅಭಿಪ್ರಾಯ ಶೇ 10 ಜನರಲ್ಲಿ 7 ಜನರಿಂದ ಬಂದಿರೋದು ಸತ್ಯ.
ಮಳೆ ಲೆಕ್ಕಿಸದೆ ಜನ ಬಂದೇ ಬಿಟ್ಟರು
ಶುಕ್ರವಾರ ಮೌಥ್ ಪಬ್ಲಿಸಿಟಿ ಹೆಚ್ಚಾಗಿತ್ತು. ಅದರಲ್ಲಿಯೇ ಮುಗುಳು ನಗೆ ನಿಜಕ್ಕೂ ಜೀವ ಪಡೆದಿರೋದು.ಯಾಕೆಂದ್ರೆ, ಮಳೆಯನ್ನೂ ಲೆಕ್ಕಿಸದೆ ಜನ ಶನಿವಾರ ಥಿಯೇಟರ್ ಗೆ ಬಂದೇ ಬಿಟ್ಟರು. ಮಲ್ಟಿಪ್ಲೆಕ್ಸ್  ಸೇರಿದಂತೆ ಸಿಂಗಲ್ ಥಿಯೇಟರ್ ನಲ್ಲೂ ಅಂದು ಜನವೋ ಜನ…


ರಾಜ್ಯದ 230 ಥಿಯೇಟರ್ ನಲ್ಲಿ ರಿಲೀಸ್
ಮುಗುಳು ನಗೆ ಈ ವರ್ಷದ ಬಹು ನಿರೀಕ್ಷೆಯ ಸಿನಿಮಾನೇ ಆಗಿದೆ. 10 ವರ್ಷದ ನಂತರ ಗಣಿ ಮತ್ತು ಭಟ್ಟರು ಈ ಸಿನಿಮಾ ಮಾಡಿದ್ದು. ಅಲ್ಲದೇ ಈ ಒಳ್ಳೆ ಸಿನಿಮಾವನ್ನ ವಿತರಕ ಜಾಕ್ ಮಂಜು ರಾಜ್ಯದ 230 ಥಿಯೇಟರ್ ನಲ್ಲಿ ರಿಲೀಸ್ ಮಾಡಿದರು. ಹೊರ ರಾಜ್ಯದ 30 ಕಡೆಗೆ ಮುಗುಳು ನಗೆ ರಿಲೀಸ್ ಆಗಿರೋದು ವಿಶೇಷ..
ಎರಡು ದಿನಕ್ಕೆ 4 ಕೋಟಿ ಕಲೆಕ್ಷನ್
ವಿತರಕ ಜಾಕ್ ಮಂಜು ಕೊಟ್ಟ ಕಲೆಕ್ಷನ್ ವಿವರ ಇದು. ಮೊದಲ ದಿನ ಮಾಸಿವ್ ಕಲೆಕ್ಷನ್ ಬಂದಿಲ್ಲ. ಎರಡನೇ ದಿನ ಮುಗುಳು ನಗೆ ಕಲೆಕ್ಷನ್ ಭರ್ಜರಿಯಾಗಿದೆ. ಎರಡೂ ದಿನ ಸೇರಿ ನಾಲ್ಕು ಕೋಟಿಗೂ ಹೆಚ್ಚು ಕಲೆಕ್ಷನ್ ಆಗಿದೆ. ಆದರೆ, ಜಿಎಸ್ ಟಿ ಕಟ್ ಆಗಿರೋದ್ರಿಂದ ಅದು 4 ಕೋಟಿಗೆ ಸೀಮಿತ.
ಮುಗಳು ನಗೆಯ ಈ ಕಲೆಕ್ಷನ್ ಕೇವಲ ಎರಡು ದಿನದ್ದು. ಭಾನುವಾರ ಹೇಳಬೇಕೆ ?. ಅದು ಇನ್ನೂ ಹೆಚ್ಚಾಗೋ ಸಾಧ್ಯತೆ ಹೆಚ್ಚಿದೆ. ಸೋಮವಾರದ ಹೊತ್ತಿಗೆ ಮುಗುಳು ನಗೆ ಕಲೆಕ್ಷನ್ ಇನ್ನೂ ಆಶ್ಚರ್ಯ ಮೂಡಿಸಲಿದೆ. ವೇಯ್ಟ್….

4 thoughts on “ಗಣಿ, ಭಟ್ಟರ ಮುಖದಲಿ ಮುಗಳು ನಗೆ : ಬಾಕ್ಸ್ ಆಫೀಸ್ ನಲ್ಲಿ ಹರಿಯುತಿದೆ ಹಣದ ಹೊಳೆ..

 • October 16, 2017 at 4:55 PM
  Permalink

  naturally like your web site but you have to test the spelling on several of your posts. Several of them are rife with spelling issues and I find it very bothersome to tell the truth however I¡¦ll definitely come back again.

 • October 24, 2017 at 12:18 PM
  Permalink

  Usually I don’t learn article on blogs, however I would like to say that this write-up very pressured me to check out and do so! Your writing style has been surprised me. Thank you, quite nice post.

 • October 24, 2017 at 12:45 PM
  Permalink

  Useful information. Fortunate me I found your site unintentionally, and I am stunned why this twist of fate didn’t came about in advance! I bookmarked it.

 • October 24, 2017 at 1:10 PM
  Permalink

  You made some respectable factors there. I appeared on the internet for the difficulty and found most people will go together with with your website.

Comments are closed.