ಗೋರಕ್‌ ಪುರ ಆಯ್ತು, ಈಗ ಫರೂಕಾಬಾದ್‌ ಆಸ್ಪತ್ರೆಯಲ್ಲಿ 49 ಮಕ್ಕಳ ಮಾರಣ ಹೋಮ

ಫರೂಕಾಬಾದ್‌ : ಗೋರಕ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ನಡೆದ ಮಕ್ಕಳ ಸಾವಿನ ನೆನಪು ಹಸಿಯಾಗಿರುವ ಬೆನ್ನಲ್ಲೇ ಉತ್ತರ ಪ್ರದೇಶದ ಫರೂಕಾಬಾದ್‌ ಆಸ್ಪತ್ರೆಯಲ್ಲಿ ಆಕ್ಸಿಜನ್‌ ಕೊರತೆಯಿಂದ 49 ಮಕ್ಕಳು ಸಾವಿನ ಮನೆ ಸೇರಿದ್ದಾರೆ.

ಫರೂಕಾಬಾದ್‌ನ ರಾಮ್‌ ಮನೋಹರ್‌ ಲೂಹಿಯಾ ರಾಜ್‌ ಕಿಯಾ ಆಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದಾಗಿ ಮಕ್ಕಳು ಸಾವಿಗೀಡಾಗಿರುವುದಾಗಿ ಹೇಳಲಾಗಿದೆ. ಅನೇಕ ತಿಂಗಳಿನಿಂದ ಆಸ್ಪತ್ರೆಗೆ ಸರಿಯಾಗಿ ಆಕ್ಸಿಜನ್‌ ಸಿಲಿಂಡರ್‌ಗಳ  ಪೂರೈಕೆಯಾಗುತ್ತಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ಘಟನೆ ಸಂಬಂಧ ತನಿಖೆ ನಡೆಸುವಂತೆ ಫರೂಕಾಬಾದ್‌ ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಆದೇಶಿಸಿದ್ದಾರೆ. ಘಟನೆಗೆ ವೈದ್ಯರ ನಿರ್ಲಕ್ಷ್ಯವೂ ಕಾರಣ ಎನ್ನಲಾಗುತ್ತಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ವೈದ್ಯರ ವಿರುದ್ದ ತನಿಖೆಗೆ ಆದೇಶಿಸಲಾಗಿದೆ.

ಗೋರಕ್‌ಪುರದ ಬಳಿಕ ಉತ್ತರ ಪ್ರದೇಶದ ಮತ್ತೊಂದು ಆಸ್ಪತ್ರೆಯಲ್ಲಿ ಮಕ್ಕಳ ಮಾರಣ ಹೋಮ ನಡೆದಿರುವುದು ಸಿಎಂ ಯೋಗಿ ಆದಿತ್ಯನಾಥ್‌ಗೆ ತಲೆನೋವಾಗಿ ಪರಿಣಮಿಸಿದೆ.

 

One thought on “ಗೋರಕ್‌ ಪುರ ಆಯ್ತು, ಈಗ ಫರೂಕಾಬಾದ್‌ ಆಸ್ಪತ್ರೆಯಲ್ಲಿ 49 ಮಕ್ಕಳ ಮಾರಣ ಹೋಮ

  • October 20, 2017 at 9:49 PM
    Permalink

    I adore your wp web template, wherever would you obtain it through?

Comments are closed.