ಮಾತೆ ಮಹಾದೇವಿ ಗುರುದ್ರೋಹಿ, ನಾಲಾಯಕ್ : ಕೊಳಲೆ ಮಠದ ಸ್ವಾಮೀಜಿ ಆಕ್ರೋಶ

ಬಾಗಲಕೋಟೆ : ಮಾತೆ ಮಹಾದೇವಿ ಒಬ್ಬ ಗುರುದ್ರೋಹಿ. ನಾಲಾಯಕ್‌. ಬಸವಣ್ಣನವರ ಅಂಕಿತನಾಮ ತೆಗೆದು ಲಿಂಗದೇವ ಎಂದು ತಿರುಚಿದ್ದಳು ಎಂದು ಬಾಗಲಕೋಟೆಯ ಶಿವಯೋಗಿ ಮಂದಿರದಲ್ಲಿ ಕೊಳಲೆಮಠದ ಸ್ವಾಮೀಜಿ ಮಾತೆ ಮಹಾದೇವಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತೆ ಮಹಾದೇವಿ ವಿರುದ್ದ ಏಕವಚನದಲ್ಲಿ ಮಾತನಾಡಿದ ಕೊಳಲೆ ಮಠದ ಸ್ವಾಮೀಜಿ, ಗುರು ಲಿಂಗದೇವರು ಇದ್ದಾನೋ, ಸತ್ತಿದ್ದಾನೋ? ಲಿಂಗದೇವರು ಯಾರು? ಇವಳಿಗೂ ಅವನಿಗೂ ಏನು ಸಂಬಂಧ ಸ್ಪಷ್ಟಪಡಿಸುವಂತೆ ಆಗ್ರಹಿಸಿದ್ದಾರೆ. ಮಾತೆ ಮಹಾದೇವಿ ಮತ್ತು ಗುರುಲಿಂಗದೇವನದ್ದು ಪುತ್ರವಾತ್ಸಲ್ಯ ಸಂಬಂಧವೋ, ಗುರುಶಿಷ್ಯರ ಸಂಬಂಧವೋ ಹೇಳಲಿ ಎಂದಿದ್ದಾರೆ.