CRICKET : ವಿರಾಟ್ ಶತಕ , ಸರಣಿಯನ್ನು 5-0 ಕ್ಲೀನ್ ಸ್ವೀಪ್ ಮಾಡಿದ ಟೀಮ್ ಇಂಡಿಯಾ

ಕೋಲಂಬೋದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ ಲಂಕಾ ವಿರುದ್ಧ, 6 ವಿಕೆಟ್ ಜಯಗಳಿಸಿದೆ. ಟಾಸ್ ಗೆದ್ದ ಲಂಕಾ ಬ್ಯಾಟಿಂಗ್ ಆಯ್ದುಕೊಂಡು 49.4 ಓವರ್ ಗಳಲ್ಲಿ 238 ರನ್ ಗಳಿಸಿ ಆಲೌಟ್ ಆಯಿತು. ಲಾಹಿರು ತಿರಿಮನ್ನೆ 67, ಏಂಜೆಲೋ ಮ್ಯಾಥ್ಯೂಸ್ 55 ರನ್ ಗಳಿಸಿದರು. ಭಾರತದ ಪರ ಭುವನೇಶ್ವರ್ ಕುಮಾರ್ 5 ವಿಕೆಟ್ ಪಡೆದು ಮಿಂಚಿದರು. ಗುರಿಯನ್ನು ಬೆನ್ನತ್ತಿದ ಭಾರತ 46.3 ಓವರ್ ಗಳಲ್ಲಿ 239 ರನ್ ಗಳಿಸಿ ಗೆಲುವಿನ ನಗೆ ಬೀರಿತು. ನಾಯಕ ವಿರಾಟ್ ಕೊಹ್ಲಿ  ಅಜೇಯ 110 ಹಾಗೂ ಕೇದಾರ್ ಜಾಧವ್ 67 ರನ್ ಗಳಿಸಿದರು.

Comments are closed.

Social Media Auto Publish Powered By : XYZScripts.com